ಬೆಂಗಳೂರು : ಕೋಟ್ಯಂತರ ಜನರ ಹಸಿವು ನೀಗಿಸುತ್ತಿರುವ ಈ ನಾಡಿನ ಪ್ರತಿ ಅನ್ನದಾತನಿಗೂ ರಾಷ್ಟ್ರೀಯ ರೈತ ದಿನದ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೃಷಿ ದೇಶದ ಬೆನ್ನೆಲುಬು. ಕೃಷಿಯನ್ನು ಕೇವಲ ವೃತ್ತಿಯಾಗಿಸಿಕೊಳ್ಳದೆ, ಬದುಕಿನ ಮಾರ್ಗವಾಗಿಸಿಕೊಂಡು ಕೋಟ್ಯಂತರ ಜನರ ಹಸಿವು ನೀಗಿಸುತ್ತಿರುವ ಈ ನಾಡಿನ ಪ್ರತಿ ಅನ್ನದಾತನಿಗೂ ರಾಷ್ಟ್ರೀಯ ರೈತ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ರೈತಪರವಾದ ನೀತಿ – ನಿಲುವುಗಳಿಂದಾಗಿ ನಾಡಿನಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಇಳಿಕೆ ಕಂಡಿರುವುದು ಸಂತಸದ ವಿಚಾರ. ಬೆಳೆ ನಷ್ಟ, ಸಾಲ ಬಾಧೆ ಮುಂತಾದ ಕಾರಣಗಳಿಗಾಗಿ ಒಬ್ಬನೇ ಒಬ್ಬ ರೈತನೂ ಆತ್ಮಹತ್ಯೆಗೆ ಶರಣಾಗದಂತೆ ತಡೆಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಯತ್ನ ನಿರಂತರವಾಗಿರಲಿದೆ ಎಂದು ತಿಳಿಸಿದ್ದಾರೆ.
ಕೃಷಿ ದೇಶದ ಬೆನ್ನೆಲುಬು. ಕೃಷಿಯನ್ನು ಕೇವಲ ವೃತ್ತಿಯಾಗಿಸಿಕೊಳ್ಳದೆ, ಬದುಕಿನ ಮಾರ್ಗವಾಗಿಸಿಕೊಂಡು ಕೋಟ್ಯಂತರ ಜನರ ಹಸಿವು ನೀಗಿಸುತ್ತಿರುವ ಈ ನಾಡಿನ ಪ್ರತಿ ಅನ್ನದಾತನಿಗೂ ರಾಷ್ಟ್ರೀಯ ರೈತ ದಿನದ ಶುಭಾಶಯಗಳು.
ನಮ್ಮ ಸರ್ಕಾರದ ರೈತಪರವಾದ ನೀತಿ – ನಿಲುವುಗಳಿಂದಾಗಿ ನಾಡಿನಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಗಣನೀಯ ಇಳಿಕೆ ಕಂಡಿರುವುದು ಸಂತಸದ… pic.twitter.com/HlbiUsUzwQ
— Siddaramaiah (@siddaramaiah) December 23, 2024