Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

BREAKING : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ ಬಿಸಿ ಲೋಹ ಬಿದ್ದು, 8 ಕಾರ್ಮಿಕರು ಸಜೀವ ದಹನ | Watch Video

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಇಂದು ಸಿಎಂ ಸಿದ್ದರಾಮಯ್ಯರಿಂದ ಕಲಬುರ್ಗಿಯ ‘ಜಯದೇವ ಹೃದ್ರೋಗ’ ಆಸ್ಪತ್ರೆ ಲೋಕಾರ್ಪಣೆ
KARNATAKA

BREAKING : ಇಂದು ಸಿಎಂ ಸಿದ್ದರಾಮಯ್ಯರಿಂದ ಕಲಬುರ್ಗಿಯ ‘ಜಯದೇವ ಹೃದ್ರೋಗ’ ಆಸ್ಪತ್ರೆ ಲೋಕಾರ್ಪಣೆ

By ಸುರೇಶ್‌

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಇಂದು ಜಯದೇವ ಆಸ್ಪತ್ರೆಯ ಲೋಕಾರ್ಪಣೆ ಆಗಲಿದೆ. ಕಲಬುರ್ಗಿ ನಗರದ ಎಸ್.ಪಂಡಿತ ರಂಗಮಂದಿರದ ಎದುರುಗಡೆ ಇರುವಂತಹ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

ಕೆಕೆಆರ್‌ಡಿಬಿ ಸಹಯೋಗದಲ್ಲಿ ಈ ಒಂದು ಆಸ್ಪತ್ರೆ ನಿರ್ಮಿಸಲಾಗಿದ್ದು, 371 ಹಾಸಿಗೆ ಸಾಮರ್ಥ್ಯದ ನೂತನ ಹೃದ್ರೋಗ ಆಸ್ಪತ್ರೆಯಾಗಿದೆ. ಸುಮಾರು 327.17 ಕೋಟಿ ವೆಚ್ಚದಲ್ಲಿ ಈ ಒಂದು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಈಗಿರುವ 10 ವೈದ್ಯರ ಜೊತೆಗೆ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಲಾಗಿದೆ. ಹೆಚ್ಚುರಿಯಾಗಿ 21 ವೈದ್ಯರು 120 ಸ್ಟಾಫ್ ನರ್ಸ್ ಗಳು ಸೇರಿದಂತೆ ಇತರೆ ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ. ನೂತನ ಜಯದೇವ ಆಸ್ಪತ್ರೆಯಲ್ಲಿ ಮೂರು ಕ್ಯಾತ ಲ್ಯಾಬ್ ಸೇರಿದಂತೆ ಇದರ ಅನೇಕ ವಿಶೇಷ ಸೌಲಭ್ಯಗಳನ್ನು ಕೂಡ ಒಳಗೊಂಡಿದೆ.

ಆಸ್ಪತ್ರೆಯ ವಿಶೇಷ ಸೌಲಭ್ಯಗಳು

ಕಲಬುರಗಿಯಲ್ಲಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳುತ್ತಿರುವ ಜಯದೇವ ಆಸ್ಪತ್ರೆಯ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ನಾಳೆ ಲೋಕಾರ್ಪಣೆಗೊಳ್ಳಲಿದೆ.

ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾಥಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ.

ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಶಾಖಾ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ಸಹ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಮೊದಲನೇಯದು ಎನ್ನುವ ಹೆಗ್ಗಳಿಕೆ.‌ನೂತನ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ನೀರು ಸಾಮರ್ಥ್ಯ ಟ್ಯಾಂಕ್ ಸ್ಥಾಪಿಸಿದ್ದು, 11ಕೆ.ವಿ. ವಿದ್ಯುತ್ ಕೇಂದ್ರವನ್ನು 33 ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ.

ಜಯದೇವ ಕಲಬುರಗಿ ನೂತನ ಶಾಖೆಯ ವಿಶೇಷತೆಗಳು ಹೀಗಿವೆ:

❖ 371 ಹಾಸಿಗೆ ಸಾಮರ್ಥ್ಯದ ಕಟ್ಟಡ
❖ 3 ಕ್ಯಾಥ್‌ಲ್ಯಾಬ್‌ಗಳು
❖ 3 ಆಪರೇಷನ್ ಥಿಯೇಟರ್‌ಗಳು
❖ 1 ಹೈಬ್ರಿಡ್ OT
❖ 105 ICCU ಹಾಸಿಗೆಗಳು
❖ 120 ಸಾಮಾನ್ಯ ವಾರ್ಡ್ ಬೆಡ್‌
❖ ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು
❖ ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್‌ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ದೊರಕಲಿದೆ.

Share. Facebook Twitter LinkedIn WhatsApp Email

Related Posts

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

1 Min Read

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

2 Mins Read

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

1 Min Read
Recent News

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

BREAKING : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯಲ್ಲಿ ಬಿಸಿ ಲೋಹ ಬಿದ್ದು, 8 ಕಾರ್ಮಿಕರು ಸಜೀವ ದಹನ | Watch Video

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

State News
KARNATAKA

ಈಗ ಒಳ್ಳೆಯ ಆಡಳಿತ ಕೊಟ್ಟರೆ, 2028ರ ಚುನಾವಣೆಯಲ್ಲಿ ಅನುಕೂಲ ಆಗಲಿದೆ : ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಸಲಹೆ!

By ಸುರೇಶ್‌ KARNATAKA 1 Min Read

ಬೆಂಗಳೂರು : ಈಗ ಒಳ್ಳೆಯ ಆಡಳಿತ ಕೊಟ್ಟರೆ ಮುಂದೆ ಪಕ್ಷಕ್ಕೆ ಅನುಕೂಲ ಆಗಲಿದೆ. 2028 ರ ಚುನಾವಣೆಗೆ ಈಗಿನ ಒಳ್ಳೆಯ…

BIG NEWS : ರಾಜ್ಯದಲ್ಲಿ `ರೌಡಿಸಂ’ಗೆ ಬ್ರೇಕ್ ಹಾಕಲು ಮಹತ್ವದ ಕ್ರಮ: ‘ರೌಡಿ ಸ್ಕ್ವಾಡ್’ ರಚನೆಗೆ ಸರ್ಕಾರ ಮಹತ್ವದ ಆದೇಶ

BREAKING : ಸೂರಜ್ ಹೆಗ್ಡೆ ಅಂತಿಮ ದರ್ಶನ ಪಡೆದ ರಾಹುಲ್ ಗಾಂಧಿ : ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ!

ಮೆಂತ್ಯ ಸೊಪ್ಪು ಸೇವಿಸುವುದರಿಂದ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.