ರಾಯಚೂರು : ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಕೆಳಗೆ ಸಿಲುಕಿ ಮಹಿಳೆಯೊಬ್ಬರು ಧಾರಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ನಲ್ಲಿ ನಡೆದಿದೆ.
ಹೌದು ಲಾರಿ ಕೆಳಗೆ ಸಿಲುಕಿ ಹುಸೇನಮ್ಮ (55) ಎನ್ನುವ ಮಹಿಳೆ ಸಾವನ್ನಪ್ಪಿದ್ದು, ಲಾರಿ ಹರಿದ ಪರಿಣಾಮ ಹುಸೇನಮ್ಮರ ದೇಹ ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಅರಗಿನಮರ ಕ್ಯಾಂಪ್ನಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಪರಮೇಶ್ವರದಿನ್ನಿ ಗ್ರಾಮದ ಹುಸೇನಮ್ಮ ದುರ್ಮರಣ ಹೊಂದಿದ್ದಾರೆ.
ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಮಹಿಳೆ ಕೆಳಗೆ ಬಿದ್ದಿದ್ದರು. ಈ ವೇಳೆ ಲಾರಿ ಹರಿದು ಸ್ಥಳದಲ್ಲೇ ಹುಸೇನಮ್ಮ ಸಾವನಪ್ಪಿದ್ದಾರೆ. ತಾಯಿಯ ದೇಹದ ಅರ್ಧ ಭಾಗ ಹಿಡಿದು ಮಗ ಗೋಳಾಟ ನಡೆಸುತ್ತಿದ್ದಾನೆ.ಮಗ ಹಾಗೂ ತಾಯಿ ಬೈಕ್ ನಲ್ಲಿ ಸಿಂಧನೂರಿಗೆ ತೆರಳುತ್ತಿದ್ದರು. ಸಿಂಧನೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.