ನವದೆಹಲಿ : ವಕ್ಫ್ ಆಸ್ತಿ ಕಬಳಿಕೆಗೆ ಮೌನವಾಗಿರಲು ಬಿವೈ ವಿಜಯೇಂದ್ರ ಅನ್ವರ್ ಮಣಿಪ್ಪಾಡಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ಗಂಭೀರವಾದ ಆರೋಪ ಮಾಡಿದ್ದಾರೆ. ಈ ಒಂದು ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿಯ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅನ್ವರ್ ಮಣಿಪಾಡಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿದು, ಧರ್ಮಸಿಂಗ್ ಪುತ್ರ, ಬಿವೈ ವಿಜಯೇಂದ್ರ ಅಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸಿಂಗ್ ಪುತ್ರ ಅನ್ವರ್ ಮಣಿಪಾಡಿಗೆ ಆಮಿಷ ಒಡ್ಡಿದ್ದರು. 150 ಕೋಟಿ ಆಮಿಷ ಒಡ್ಡಿದ್ದು ಧರ್ಮಸಿಂಗ್ ಪುತ್ರ. ಅನ್ವರ್ ಮಾಡಿಪಾಡಿಗೆ ಆಮಿಷಡ್ಡಿ ಕಾಂಗ್ರೆಸ್ ಮುಖಂಡರಿಗೆ ಬುದ್ಧಿ ಭ್ರಮಣೆ ಆಗಿದೆ. ವಕ್ಫ್ ವಕ್ಫ್ ವರದಿಯಲ್ಲಿ ತಮ್ಮ ಹೆಸರು ಕೈಬಿಡಬೇಕೆಂದು ಧರ್ಮಸಿಂಗ್ ಪುತ್ರ ಅನ್ವರ್ ಮಣಿಪ್ಪಾಡಿಗೆ ಆಮಿಷ ಒಡ್ಡಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಾರಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.