Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಪಾಕಿಸ್ತಾನದಲ್ಲಿ ಪತ್ತೆ

21/04/2026 2:38 PM

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ: ಸಚಿವ ಶಿವರಾಜ್ ತಂಗಡಗಿ
KARNATAKA

ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ: ಸಚಿವ ಶಿವರಾಜ್ ತಂಗಡಗಿ

By kannadanewsnow0917/12/2024 8:00 PM

ಬೆಳಗಾವಿ ಸುವರ್ಣಸೌಧ: ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ತಂಗಡಗಿ ಅವರು ಹೇಳಿದರು.

ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೆಳಗಾವಿಯ ಸುವರ್ಣಸೌಧದ ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 150 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರಾರಂಭಕ್ಕೆ ಸಚಿವರು ಆನ್ಲೈನ್ ಮೂಲಕ ಚಾಲನೆ‌ ನೀಡಿ ಮಾತನಾಡಿದರು.

ಪ್ರತಿ ವರ್ಷ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಸಲ್ಲಿಸುತ್ತಾರೆ. 2.46,000 ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಉಳಿದ‌ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ರೈತ,‌ ಬಡ ಹಾಗೂ ಕಾರ್ಮಿಕ ಕುಟುಂಬದಿಂದ‌ ಬಂದವರಾಗಿದ್ದು, ಹಾಸ್ಟೆಲ್ ನ ಸೌಲಭ್ಯವನ್ನು ಪಡೆದು ಉನ್ನತ ಹುದ್ದೆಗೇರಬೇಕು. ನಾವು ಓದುವ ಕಾಲಘಟ್ಟದಲ್ಲಿ ನಾಲ್ಕೈದು ಕಿ.ಮೀ ನಡೆದು ಪ್ರೌಢ ಶಾಲೆ ವ್ಯಾಸಂಗ ಮುಗಿಸಿದೆವು. ಆದರೆ ಇಂದು ಸರ್ಕಾರ ಹಾಸ್ಟೆಲ್ ವಸತಿ ಮಾತ್ರವಲ್ಲ. ಮೂಲಸೌಲಭ್ಯ, ಪುಸ್ತಕ, ಗ್ರಂಥಾಲಯದ ವ್ಯವಸ್ಥೆಯನ್ನು ಮಾಡಿದೆ. ಹಾಸ್ಟೆಲ್ ನಲ್ಲಿ ಉತ್ತಮ ಗುಣಮಟ್ಟದ ಆಹಾರ, ಹಾಸ್ಟೆಲ್ ನವೀಕರಣ, ಪುಸ್ತಕ ವಿತರಣೆ, ಗ್ರಂಥಾಲಯದ ವ್ಯವಸ್ಥೆ ಎಲ್ಲವನ್ನು ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಗಂತ ಡಿ.ದೇವರಾಜ ಅರಸು ಅವರನ್ನು ನಾವು ನೆನಪು ಮಾಡಿಕೊಳ್ಳಬೇಕು. ಅರಸು ಅವರು ಹಿಂದುಳಿದ‌ ವರ್ಗದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಇಂದು ನಮ್ಮ ಮುಖ್ಯಮಂತ್ರಿಗಳು ಬಡ,‌ ದೀನ ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದವರಾಗಿದ್ದಾರೆ.‌ ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯದಡಿ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಯಾರಾದರೂ ಇದ್ದಾರೆ ಅದು ಸಿದ್ದರಾಮಯ್ಯ ಅವರು ಮಾತ್ರ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಷ್ಟ ಅನುಭವಿಸಿದವರಿಗೆ ಹಾಸ್ಟೆಲ್ ಜೀವನ ಎಂಬುದು ಗೊತ್ತು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂಬುದು ಸರ್ಕಾರದ ಉದ್ದೇಶ.‌ ಶ್ರದ್ಧೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಸಂಸ್ಕಾರವಂತರಾಗಬೇಕು ಎಂದರು.‌

ವಿದ್ಯಾರ್ಥಿಗಳಿಗೆ ವಾರ್ಡನ್ ಹಾಗೂ ಶಿಕ್ಷಕ್ಷರು‌ ಸೂಕ್ತ ಮಾರ್ಗದರ್ಶನ ಮಾಡಿದರೆ, ಆ ಮಕ್ಕಳು ಜೀವನ ಪರ್ಯಾಂತ ನಿಮ್ಮನ್ನು ನೆನೆಸುತ್ತಾರೆ. ಇನ್ನು ವಿದ್ಯಾರ್ಥಿಗಳು ಎಷ್ಟು ಎತ್ತರಕ್ಕೆ‌ ಬೆಳೆದ್ರು, ಶಿಕ್ಷಕರಾದವರು ಹಾಗೆಯೇ ಇರುತ್ತಾರೆ. ಹೀಗಾಗಿ ಶಿಕ್ಷಣ ನೀಡಿದ ಶಿಕ್ಷಕ್ಷರನ್ನು ಮರೆಯಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣನವರ್, ಆಯುಕ್ತರಾದ ಶ್ರೀನಿವಾಸ್, ಜಂಟಿ ನಿರ್ದೇಶಕರಾದ ಜಿ.ಜಗದೀಶ್, ಡಾ.ಸಿ.ಕೆ.ಜಗದೀಶ್ ಕುಮಾರ್, ಪ್ರದೀಪ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇಲಾಖೆಯಿಂದ ಓದು ಮುಂದುವರೆಸಿದ್ದೀನಿ:

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ನಮ್ಮಂತಹ ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ನೆರವಾಗಿದೆ. ಕೃಷಿ ಕುಟುಂಬದಿಂದ ಬಂದ ನಮಗೆ ವಿದ್ಯಾಭ್ಯಾಸ ಪಡೆಯುವುದು ದೂರುವಾಗಿತ್ತು. ನಮಗೆ ನಮ್ಮ ಪೋಷಕರು ವಿದ್ಯಾಭ್ಯಾಸ ಬೇಡ ಎಂದು ಹೇಳಿದ್ರು. ಕಾಲೇಜಿಗೆ ಓಡಾಡುವುದೇ ಕಷ್ಟವಾಗಿತ್ತು. ಖಾಸಗಿ ಪಿ.ಜಿ.ಯಲ್ಲಿ ಉಳಿದು ಅದಕ್ಕೆ ಹಣ ಪಾವತಿಸುವುದು ಕಷ್ಟ ಎಂದ ಹೇಳಿದ್ರು‌. ಆದರೆ ನನಗೆ ಇಲಾಖೆಯ ಹಾಸ್ಟೆಲ್ ನಿಂದ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಸಚಿವರು ಹಾಗೂ ಸರ್ಕಾರಕ್ಕೆ ವಿದ್ಯಾರ್ಥಿನಿ ಧನ್ಯವಾದಗಳನ್ನು ತಿಳಿಸಿದರು.

BREAKING: ವಿಧಾನ ಪರಿಷತ್ತಿನಲ್ಲಿ ‘ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕ’ ಅಂಗೀಕಾರ

ಇನ್ಮುಂದೆ ಆನ್‌ಲೈನ್‌ ಮೂಲಕ NEET ಪರೀಕ್ಷೆ.?: ಶೀಘ್ರ ನಿರ್ಧಾರವೆಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ | NEET exam

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM1 Min Read

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM2 Mins Read

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM1 Min Read
Recent News

BREAKING: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಪಾಕಿಸ್ತಾನದಲ್ಲಿ ಪತ್ತೆ

21/04/2026 2:38 PM

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

21/04/2026 2:31 PM

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM
State News
KARNATAKA

ಬೆಂಗಳೂರಲ್ಲಿ ಜನಗಣತಿಗೆ ಗೈರಾದವರಿಗೆ ಜಿಬಿಎ ಶಾಕ್: ಎಫ್ಐಆರ್ ದಾಖಲಿಸಿ, ಕಾನೂನು ಕ್ರಮದ ಎಚ್ಚರಿಕೆ

By kannadanewsnow0921/04/2026 2:31 PM KARNATAKA 1 Min Read

ಬೆಂಗಳೂರು : ಜಿಬಿಎ (GBA) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯದ ಪ್ರಗತಿಯು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ, ಕರ್ತವ್ಯಕ್ಕೆ ಹಾಜರಾಗದ ಸಾವಿರಾರು ಸಿಬ್ಬಂದಿಗಳ…

ಕಟ್ಟಡ ಕಾರ್ಮಿಕರೇ ಎಚ್ಚರ! ಸಿಮೆಂಟ್ ಬಳಕೆಯಲ್ಲಿ ಅಜಾಗರೂಕತೆ ಬೇಡ: ಇಲ್ಲಿವೆ ಆರೋಗ್ಯ ರಕ್ಷಣೆಗೆ ಅಗತ್ಯ ಸಲಹೆಗಳು

21/04/2026 2:25 PM

ಉಪನ್ಯಾಸಕ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: ಕೆ-ಸೆಟ್, ಯುಜಿಸಿ-ನೆಟ್ ತರಬೇತಿಗೆ ಕರಾಮುವಿ ಅರ್ಜಿ ಆಹ್ವಾನ

21/04/2026 2:11 PM

BIG NEWS : 2ನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ವೈದ್ಯನ ಕೊಲೆ ಕೇಸ್ : 24 ಗಂಟೆಯಲ್ಲಿ ಆರೋಪಿ ಅರೆಸ್ಟ್!

21/04/2026 2:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.