ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕೃಷಿಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಈ ಒಂದು ಸ್ಫೋಟದ ದೃಶ್ಯವನ್ನು ಚಿತ್ರಿಕರಣ ಮಾಡಿದ ಕ್ಯಾಮೆರಾ ಮ್ಯಾನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಹೌದು ದೃಶ್ಯ ಚಿತ್ರೀಕರಿಸಿದ್ದ ಕ್ಯಾಮೆರಾ ಮ್ಯಾನ್ ವಶಕ್ಕೆ ಪಡೆದು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಜೊತೆಗೆ ಕ್ಯಾಮೆರಾ ಮ್ಯಾನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಪೋಟದ ದೃಶ್ಯವನ್ನು ಚಿತ್ರಿಕರಣಕ್ಕೆ ಬಳಸಿದಂತಹ ಕ್ಯಾಮೆರಾ ಸಹ ಇದೀಗ ಪೊಲೀಸರು ಸೀಸ್ ಮಾಡಿದ್ದಾರೆ. ಬೆಂಗಳೂರಿನ ಜೆಪಿ ನಗರದ ಸಂಜು ಎಂಬುವವರ ಮನೆಯಲ್ಲಿದ್ದ ಕ್ಯಾಮೆರಾವನ್ನು ಸೀಜ್ ಮಾಡಲಾಗಿದೆ.
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿ ಮಾಡಲಾಗಿತ್ತು. ವಾಸ ಸೈಂಟಿಸ್ಟ್ ಶಾಪ್ ನಲ್ಲಿ ಡ್ರೋನ್ ಪ್ರತಾಪ್ ಸೋಡಿಯಂ ಖರೀದಿಸಿದ್ದ ಎಂದು ತಿಳಿದುಬಂದಿದೆ. 75 ವರ್ಷದಿಂದ ಅಧಿಕೃತವಾಗಿ ಸೋಡಿಯಂ ಕೆಮಿಕಲ್ ಶಾಪ್ ನಡೆಸುತ್ತಿದ್ದರು. ಶಾಲಾ ಕಾಲೇಜುಗಳ ಪ್ರಯೋಗಾಲಗಳಿಗೆ ಈ ಒಂದು ಸೋಡಿಯಂ ಬಳಕೆಗೆ ಪೂರೈಕೆ ಮಾಡಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲಿಕ ಜಿತೇಂದ್ರ ಕುಮಾರ್ ಜೈನ್ ಅವರಿಗೂ ನೋಟಿಸ್ ನೀಡಲು ಇದೀಗ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಮಿಡಿಗೇಶಿ ಪೊಲೀಸರು ಸೂಚಿಸಿದ್ದಾರೆ. ಮಿಡಿಗೇಶಿ ಠಾಣೆ ಪೊಲೀಸರಿಂದ ಪ್ರತಾಪ್ ವಿಚಾರಣೆ ಇದೀಗ ಮುಂದುವರೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಡ್ರೋಣ್ ಪ್ರತಾಪ್ ವಿಚಾರಣೆ ಮುಂದುವರೆದಿದೆ.