ರಾಯಚೂರು : ಬಳ್ಳಾರಿ, ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇದರ ಬೆನ್ನಲ್ಲೇ ಇದೀಗ ರಾಯಚೂರಿನಲ್ಲೂ ಕೂಡ ಇಂದು ಮತ್ತೋರ್ವ ಬಾಣಂತಿ ಸಾವನಪ್ಪಿದ್ದಾಳೆ. ರಾಯಚೂರು ಜಿಲ್ಲೆಯ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಶ್ವರಿ (32) ಎನ್ನುವ ಬಾಣಂತಿ ಸಾವನ್ನಪ್ಪಿದ್ದಾರೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಮತ್ತೋರ್ವ ಬಾಣಂತಿಯ ಸಾವಾಗಿದ್ದು, ಮೂರು ತಿಂಗಳ ಅವಧಿಯಲ್ಲಿ ಒಟ್ಟು 10 ಬಾಣಂತಿಯರ ಸಾವಾಗಿದೆ. ಗಾರಲದಿನ್ನಿ ಗ್ರಾಮದಲ್ಲಿ ಬಾಣಂತಿ ಈಶ್ವರಿ ಸಾವನ್ನಪ್ಪಿದ್ದಾಳೆ. ಜ್ವರದಿಂದ ಈಶ್ವರಿ ಬಳಲುತ್ತಿದ್ದು ಇದೀಗ ಸಾವನ್ನಪ್ಪಿದ್ದಾರೆ ಡಿಸೆಂಬರ್ 8 ರಂದು ಈಶ್ವರಿಗೆ ನಾರ್ಮಲ್ ಹೆರಿಗೆ ಆಗಿತ್ತು. ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಶ್ವರಿಗೆ ಹೆರಿಗೆ ಆಗಿತ್ತು.
ಹೆರಿಗೆಯ ನಂತರ ಮನೆಗೆ ಬಂದ ಬಳಿಕ ತೀವ್ರ ರಕ್ತಸ್ರಾವ ಹಾಗೂ ತೀವ್ರ ಜ್ವರದಿಂದ ಈಶ್ವರಿ ಬಳಲುತ್ತಿದ್ದರು. ಇದರಿಂದ ತೀವ್ರವಾಗಿ ನೋವು ಅನುಭವಿಸಿ ಸಾವನಪ್ಪಿದ್ದಾರೆ. ಮಟಮಾರಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಇದೀಗ ಆರೋಪ ಕೇಳಿ ಬಂದಿದೆ.ಸರಿಯಾದ ಚಿಕಿತ್ಸೆ ನೀಡದ ಹಾಗೂ ಸ್ಪಂದಿಸದ ಆರೋಪ ಕೇಳಿ ಬಂದಿದೆ. ತೀವ್ರ ನೋವು ಹಾಗೂ ಜ್ವರ ಹಿನ್ನೆಲೆಯಲ್ಲಿ ಕೂಡಲೇ ಈಶ್ವರಿ ಯನ್ನು ರಾಯಚೂರಿನ ರೈಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಐಶ್ವರ್ಯ ಸಾವನ್ನಪ್ಪಿದ್ದಾರೆ.