ಮಂಡ್ಯ : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಹೃದಯಾಘಾತದಿಂದ ಸಾವನಪ್ಪಿದ್ದು, ಇಂದು ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಈ ಹಿನ್ನೆಲೆಯಲ್ಲಿ ಇದೀಗ ಅವರ ಪಾರ್ಥಿವ ಶರೀರ ಚನ್ನಪಟ್ಟಣದಿಂದ ತೆರಳಿ ಮದ್ದೂರಿಗೆ ಆಗಮಿಸಲಿದ್ದು, ಈಗಾಗಲೇ ಸೋಮನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದರ ಮಧ್ಯ ಅಂತ್ಯಕ್ರಿಯ ಸ್ಥಳದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಅಂತ್ಯಕ್ರಿಯ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಳಿಯ ಹಾಗೂ ಪುತ್ರ ಭೇಟಿ ನೀಡಿದ್ದಾರೆ. ಅಳಿಯ ಅಮರ್ತ್ಯ ಹಾಗೂ ಆಕಾಶ್ ಕೆಂಪೇಗೌಡ ಭೇಟಿ ನೀಡಿದ್ದಾರೆ. ಮದ್ದೂರಿನ ಸೋಮನಹಳ್ಳಿಯಲ್ಲಿ ಇರುವಂತಹ ಸ್ಥಳಕ್ಕೆ ಇಬ್ಬರು ಆಗಮಿಸಿದ್ದಾರೆ. ಅಂತ್ಯಕ್ರಿಯೆ ಸಕಲ ಸಿದ್ಧತೆಗಳನ್ನು ಎಲ್ಲವನ್ನೂ ಕೂಡ ಪರಿಶೀಲನೆ ಮಾಡಿದ್ದಾರೆ.








