ಬೆಳಗಾವಿ : ಇಂದಿನಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಆರಂಭವಾಗಿದ್ದು, ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ ಈ ಬೆಳೆ ಸದನದಲ್ಲಿ ಇದೇ ವಿಚಾರ ಇಟ್ಕೊಂಡು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿಸದರು. ಈ ವೇಳೆ ಸ್ಪೀಕರ್ ಯುಟಿ ಖಾದರ್ ಅವರು ಸದನವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದರು.
ವಕ್ಫ್ ವಿಚಾರದ ಬಗ್ಗೆ ಬಿಜೆಪಿ ಸದಸ್ಯರು ಚರ್ಚೆಗೆ ಆಗ್ರಹಿಸಿದ್ದಾರೆ. ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸ್ಪೀಕರ್ ಯುಟಿ ಖಾದರ್ ವಿಧಾನಸಭೆಯ ಕಲಾಪ ಮುಂದೂಡಿದರು. ವಕ್ಫ್ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಗದ್ದಲ ನಡೆಸಿತು. ಗದ್ದಲದ ನಡುವೆ ಸ್ಪೀಕರ್ ಯುಟಿ ಖಾದರ್ ಮಾತು ಮುಂದುವರಿಸಿದರು.
ಅನುಭವ ಮಂಟಪ ತೈಲ ಚಿತ್ರ ಅನಾವರಣದ ಬಗ್ಗೆ ಸ್ಪೀಕರ್ ಮಾತನಾಡಿದರು. ಬಳಿಕ ನಾಳಿನ ಪಂಚಮಸಾಲಿ ಹೋರಾಟಕ್ಕೆ ನಿರ್ಬಂಧ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ವಿಧಾನದ ಬಾವಿಗೆ ಇಳಿದು ಬಿಜೆಪಿ ಪಂಚಮಸಾಲಿ ಸಮುದಾಯದ ಶಾಸಕರು ಪ್ರತಿಭಟನೆ ನಡೆಸಿದರು.