Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Amarnath Yatra

ಅಮರನಾಥ ಯಾತ್ರೆ 2026ರ ವೇಳಾಪಟ್ಟಿ ಪ್ರಕಟ: ಇಂದಿನಿಂದಲೇ ನೋಂದಣಿ ಆರಂಭ, ಯಾತ್ರಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 4:33 PM

ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತೀಯರ ರಕ್ಷಣೆ: ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ವಿದೇಶಾಂಗ ಸಚಿವ ಜೈಶಂಕರ್

12/04/2026 4:22 PM

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: 1000 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಠಿ!

12/04/2026 4:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕ್ಯಾನ್ಸರ್’ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಮುಂಚಿತವಾಗೇ ಪತ್ತೆ ಪರೀಕ್ಷೆ ಪ್ರಾರಂಭಿಸಿ ‘ಸ್ಟ್ರಾಂಡ್ ಲೈಫ್ ಸೈನ್ಸಸ್’
KARNATAKA

‘ಕ್ಯಾನ್ಸರ್’ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಮುಂಚಿತವಾಗೇ ಪತ್ತೆ ಪರೀಕ್ಷೆ ಪ್ರಾರಂಭಿಸಿ ‘ಸ್ಟ್ರಾಂಡ್ ಲೈಫ್ ಸೈನ್ಸಸ್’

By kannadanewsnow0902/12/2024 6:47 PM

ಬೆಂಗಳೂರು: ಕ್ಯಾನ್ಸರ್ ಆತಂಕದಲ್ಲಿ ಇದ್ದವರಿಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ರಿಲಯನ್ಸ್ ಅಂಗಸಂಸ್ಥೆಯಾದ ಸ್ಟ್ರಾಂಡ್ ಲೈಫ್ ಸೈನ್ಸಸ್, ಬಹು ಕ್ಯಾನ್ಸರ್ಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಪ್ರವರ್ತಕ ರಕ್ತ ಆಧಾರಿತ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಪ್ರಮುಖ ಜೀನೋಮಿಕ್ಸ್ ಹಾಗೂ ಬಯೋಇನ್ಫರ್ಮ್ಯಾಟಿಕ್ಸ್ ಕಂಪನಿ ಆದ ಸ್ಟ್ರಾಂಡ್ ಲೈಫ್ ಸೈನ್ಸಸ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಹಲವು ಬಗೆಯ ಕ್ಯಾನ್ಸರ್ ಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದಕ್ಕಾಗಿ ಈ ಕಂಪನಿಯು ರಕ್ತದ ಆಧಾರಿತವಾದ ಪರೀಕ್ಷೆಯನ್ನು ಘೋಷಣೆ ಮಾಡಿದ್ದು ಇದನ್ನು ಕ್ಯಾನ್ಸರ್ ಸ್ಪಾಟ್ (CancerSpot) ಎಂದು ಕರೆಯಲಾಗಿದೆ. ಈ ಪರೀಕ್ಷೆಗಾಗಿ ಜಾಗತಿಕ ಮಟ್ಟದಲ್ಲಿ ಅಂಗೀಕೃತವಾದ ಮೆಥಿಲೇಷನ್ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರ ಮೂಲಕವಾಗಿ ಕ್ಯಾನ್ಸರ್ ಗಡ್ಡೆಯ ಡಿಎನ್ಎ ತುಣುಕುಗಳನ್ನು ಗುರುತಿಸಲಾಗುತ್ತದೆ.

ಕ್ಯಾನ್ಸರ್ ಸ್ಪಾಟ್ ತುಂಬ ಸರಳವಾದ ರಕ್ತದ ಮಾದರಿಗಳನ್ನು ಬಳಸಿಕೊಂಡ ಕಾರ್ಯ ನಿರ್ವಹಿಸುತ್ತದೆ ಮತ್ತು ಮುಖ್ಯ ಜಿನೋಮ್ ಅನುಕ್ರಮವನ್ನು ಬಳಕೆ ಮಾಡುತ್ತದೆ ಹಾಗೂ ರಕ್ತದಲ್ಲಿ ಡಿಎನ್ಎ ಮೆಥಿಲೇಷನ್ ಕುರುಹುಗಳನ್ನು ಗುರುತಿಸುವ ವಿಶ್ಲೇಷಣೆ ಪ್ರಕ್ರಿಯೆಯನ್ನು ಮಾಡುತ್ತದೆ. ಕ್ಯಾನ್ಸರ್ ಸ್ಪಾಟ್ ಕುರುಹುಗಳು ಭಾರತೀಯ ಪದ್ಧತಿಯಿಂದ ವಿಸ್ತೃತಗೊಂಡಿದೆ. ಇದು ತುಂಬ ಬಲವಾಗಿ ಹಾಗೂ ಅನ್ವಯಿಸುವ ದೃಷ್ಟಿಯಿಂದ ಜಾಗತಿಕವಾಗಿ ಎಲ್ಲ ಜನಾಂಗಕ್ಕೂ ಹೊಂದುವಂಥದ್ದಾಗಿದೆ. ಈ ಪರೀಕ್ಷೆಯ ಮೂಲಕವಾಗಿ ತುಂಬ ಸರಳ ಮತ್ತು ಅನುಕೂಲಕರವಾದ ಒಂದೋ ಸ್ವಯಂಪ್ರೇರಿತರಾಗಿ ಅಥವಾ ಸಾಮಾನ್ಯ ಸಂದರ್ಭಗಳಿಗೆ ಕ್ಯಾನ್ಸರ್ ಸ್ಕ್ರೀನಿಂಗ್ ಗೆ ಆಯ್ಕೆಯನ್ನು ಒದಗಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಡಳಿಯ ಸದಸ್ಯೆ ಆಗಿರುವಂಥ ಇಶಾ ಅಂಬಾನಿ ಪಿರಾಮಲ್ ಅವರು ಮಾತನಾಡಿ, “ಮಾನವೀಯ ಸೇವೆಗಾಗಿ ಔಷಧ ಕ್ಷೇತ್ರದ ಭವಿಷ್ಯವನ್ನು ಮರುರೂಪಿಸುವುದರಲ್ಲಿ ಅತಿ ದೊಡ್ಡ ಪ್ರವರ್ತಕ ಬದಲಾವಣೆ ತರುವುದಕ್ಕೆ ರಿಲಯನ್ಸ್ ಬದ್ಧವಾಗಿದೆ. ಭಾರತದಲ್ಲಿ ಕ್ಯಾನ್ಸರ್ ಎಂಬುದು ಸಾವು ತರುವ ಹಾಗೂ ಬಹಳ ದೊಡ್ಡ ಕಾಯಿಲೆ ಎಂಬ ಆತಂಕಕ್ಕೆ ಕಾರಣವಾಗಿದೆ. ರೋಗಿಗೆ, ಅವರ ಕುಟುಂಬಕ್ಕೆ ಹಾಗೂ ಸಮಾಜದ ಪಾಲಿಗೆ ಅತಿದೊಡ್ಡ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಹೊರೆಯಾಗಿದೆ. ಸ್ಟ್ರಾಂಡ್ ನಿಂದ ಆರಂಭ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆ ಮಾಡಲಿದ್ದು, ಹೀಗೆ ಮಾಡುವುದರಿಂದ ಪರಿವರ್ತನೆ ತರುವ ಆರೋಗ್ಯ ರಕ್ಷಣೆ ಸಲ್ಯೂಷನ್ ಒದಗಿಸುವ ನಮ್ಮ ದೃಷ್ಟಿಕೋನಕ್ಕೆ ಮಾದರಿಯಾಗಿ- ನಿದರ್ಶನವಾಗಿ ಇದೆ. ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಸೇವೆಯಲ್ಲಿ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಲ್ಲಿ, ಭಾರತದಲ್ಲಿ ಜನರ ಜೀವನ ಸುಧಾರಿಸುವುದರಲ್ಲಿ, ಅಷ್ಟೇ ಅಲ್ಲ, ಜಗತ್ತಿನ ಉಳಿದ ಕಡೆಗಳಲ್ಲೂ ಇದು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಜೆನೋಮಿಕ್ಸ್ ನ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವುದಕ್ಕೆ ಬದ್ಧವಾಗಿದ್ದೇವೆ. ನಮ್ಮ ಪ್ರತಿ ಉಪಕ್ರಮದಲ್ಲೂ ರಿಲಯನ್ಸ್ ತನ್ನ “ವೀ ಕೇರ್” ಎಂಬ ಕಾರ್ಪೊರೇಟ್ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರುತ್ತದೆ. ಹೊಸದಾದ ಜೆನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಇದನ್ನು ಮತ್ತೊಮ್ಮೆ ಪ್ರದರ್ಶಿಸಿದೆ,” ಎಂದು ಹೇಳಿದ್ದಾರೆ.

ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿ, ಮಾತನಾಡಿದ ಸ್ಟ್ರಾಂಡ್ಸ್ ಲೈಫ್ ಸೈನ್ಸಸ್ ಸಹ ಸಂಸ್ಥಾಪಕರು ಹಾಗೂ ಸಿಇಒ ಡಾ ರಮೇಶ್ ಹರಿಹರನ್, “ಆರಂಭದಲ್ಲಿನ ಎಚ್ಚರಿಕೆ ಎಂಬುದು ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ಬಹಳ ಮುಖ್ಯವಾದದ್ದು. ಅದನ್ನು ಗೆಲ್ಲಬೇಕು. ಕ್ಯಾನ್ಸರ್ ಗಿಂತ ಒಂದು ಹೆಜ್ಜೆ ಮುಂದೆ ಇರುವುದಕ್ಕೆ ನಮಗೆ ಅನುವು ಮಾಡಿಕೊಡುವಂಥ ಕ್ಯಾನ್ಸರ್ ಆರಂಭಿಕ ಪತ್ತೆ ಪರೀಕ್ಷೆಯು ಸಹಾಯ ಮಾಡುತ್ತದೆ. ಇಪ್ಪತ್ನಾಲ್ಕು ವರ್ಷಕ್ಕೂ ಹೆಚ್ಚಿನ ಅವಧಿಯ ಇತಿಹಾಸದಿಂದಾಗಿ ಸ್ಟ್ರಾಂಡ್ ಜೀನೋಮಿಕ್ಸ್ ನಲ್ಲಿ ಮುಂಚೂಣಿಯಲ್ಲಿದೆ. ಹಲವು ವರ್ಷಗಳ ಕಠಿಣ ಅಧ್ಯಯನದ ಫಲವಾಗಿ ಭಾರತದಲ್ಲಿಯೇ ಇದು ಮೊದಲು ಎನಿಸಿಕೊಂಡಿದೆ,” ಎಂದಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿ, ಈ ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಕ್ಯಾನ್ಸರ್ ಸ್ಪಾಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಹೊಸ ಸಲ್ಯೂಷನ್ ಅಭಿವೃದ್ಧಿಪಡಿಸುವುದರಲ್ಲಿ ಶ್ರಮಕ್ಕೆ ವೇಗ, ಸಂಶೋಧನಾ ಪ್ರಯತ್ನಕ್ಕೆ ಬೆಂಬಲ ನೀಡುತ್ತದೆ. ಇದರೊಂದಿಗೆ ಭಾರತೀಯರು ಹಾಗೂ ಭಾರತ ಬಿಟ್ಟು ಜಗತ್ತಿನ ಎಲ್ಲೆಡೆ ಇರುವವರಿಗೆ ಜೀವ ಉಳಿಸುವ ಔಷಧ ಮತ್ತು ಚಿಕಿತ್ಸೆ ಒದಗಿಸುತ್ತದೆ.

ಜೀನೋಮಿಕ್ಸ್ ಮತ್ತು ಬಯೋಫಿಸಿಕಲ್ ರಸಾಯನಶಾಸ್ತ್ರದಲ್ಲಿ ಜಾಗತಿಕ ತಜ್ಞರಾದ ಡಾ. ಚಾರ್ಲ್ಸ್ ಕ್ಯಾಂಟರ್ ಅವರು ಸೋಮವಾರದಂದು (ಡಿಸೆಂಬರ್ 2ರಂದು) ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಅನ್ನು ಉದ್ಘಾಟಿಸಿದರು. ಅವರು ಈ ಹಿಂದೆ ಕೊಲಂಬಿಯಾ ವಿಶ್ವವಿದ್ಯಾನಿಲಯ, ಯುಸಿ ಬರ್ಕ್ಲಿ, ಮತ್ತು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರು. ಇದೇ ಜೀನೋಮಿಕ್ಸ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದಂಥ ಇತರ ಗಣ್ಯರ ಜೊತೆಗೆ ಕೆಲಸ ಮಾಡಿದ ಅನುಭವ ಅವರಿಗಿದೆ.

ಅಂದ ಹಾಗೆ ಈ ಕೇಂದ್ರವು 33,000 ಚದರ ಅಡಿಯಲ್ಲಿ ವ್ಯಾಪಿಸಿದ್ದು, ಅತ್ಯಾಧುನಿಕ ಜೀನೋಮಿಕ್ಸ್ ಪ್ರಯೋಗಾಲಯದ ಜೊತೆಗೆ ಇತ್ತೀಚಿನ ಅನುಕ್ರಮ ತಂತ್ರಜ್ಞಾನಗಳು ಮತ್ತು ಕೆಲಸದ ಹರಿವುಗಳ (ವರ್ಕ್ ಫ್ಲೋ) ನಡುವೆ ಬಯೋಇನ್ಫರ್ಮ್ಯಾಟಿಕ್ಸ್ ತಜ್ಞರು, ಮಾಲಿಕ್ಯುಲರ್ ಜೀವಶಾಸ್ತ್ರಜ್ಞರು ಮತ್ತು ಕ್ಲಿನಿಕಲ್ ತಂಡಗಳ ಮಧ್ಯೆ ಸಹಯೋಗ ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಕ್ಯಾನ್ಸರ್ ಸ್ಪಾಟ್ ಬಗ್ಗೆ ಹೆಚ್ಚು ಮಾಹಿತಿಗಾಗಿ, https://strandls.com/early-detection ಗೆ ಭೇಟಿ ನೀಡಿ.

ಸ್ಟ್ರಾಂಡ್ ಲೈಫ್ ಸೈನ್ಸಸ್ ಬಗ್ಗೆ ಸಂಪೂರ್ಣ ಮಾಹಿತಿಗೆ https://strandls.comಗೆ ಭೇಟಿ ನೀಡಿ.

BREAKING ; ‘ಪ್ಯಾಕೇಜ್ಡ್ ಕುಡಿಯುವ ನೀರು, ಮಿನರಲ್ ವಾಟರ್’ ಕುಡಿಯೋಕು ಮುನ್ನ ಎಚ್ಚರ ; ‘ಹೈ ರಿಸ್ಕ್ ಫುಡ್’ ವರ್ಗಕ್ಕೆ ಸೇರ್ಪಡೆ – Kannada News | India News | Breaking news | Live news | Kannada | Kannada News | Karnataka News | Karnataka News

BREAKING: ಬೆಂಗಳೂರಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆಯಿಲ್ಲ- DC ಜಗದೀಶ್ ಮಾಹಿತಿ | School Holiday

Share. Facebook Twitter LinkedIn WhatsApp Email

Related Posts

ನಾಳೆಯಿಂದ ಬೆಂಗಳೂರಿನ ಪೀಣ್ಯ ಫ್ಲೈಓವರ್ 4 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

12/04/2026 3:53 PM1 Min Read

ಹೆಂಡತಿಯನ್ನು ನೋಡಿ ಬೊಗಳಿದ್ದಕ್ಕೆ ಸಾಕು ನಾಯಿಯ ಮೇಲೆ ಕ್ರೌರ್ಯ: ಬೆಂಗಳೂರಿನಲ್ಲಿ ವ್ಯಕ್ತಿಯ ಅಮಾನವೀಯ ಕೃತ್ಯ!

12/04/2026 3:50 PM1 Min Read

ಸಾವಿನಲ್ಲೂ ಸಾರ್ಥಕತೆ: ಐವರ ಬಾಳಿಗೆ ‘ಬೆಳಕಾದ’ ಹಾಸನದ ಮೋನಿಕಾ

12/04/2026 3:42 PM2 Mins Read
Recent News
Amarnath Yatra

ಅಮರನಾಥ ಯಾತ್ರೆ 2026ರ ವೇಳಾಪಟ್ಟಿ ಪ್ರಕಟ: ಇಂದಿನಿಂದಲೇ ನೋಂದಣಿ ಆರಂಭ, ಯಾತ್ರಾರ್ಥಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

12/04/2026 4:33 PM

ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತೀಯರ ರಕ್ಷಣೆ: ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ವಿದೇಶಾಂಗ ಸಚಿವ ಜೈಶಂಕರ್

12/04/2026 4:22 PM

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ: 1000 ಕೋಟಿ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಠಿ!

12/04/2026 4:20 PM

Watch Video: ಮದುವೆಯಾದ ಮರುದಿನವೇ ದಾರುಣ ಅಂತ್ಯ: ಆಟೋ ಮೇಲೆ ಉರುಳಿಬಿದ್ದ ಟ್ರಕ್, ನವದಂಪತಿ ಸೇರಿ ನಾಲ್ವರು ಸಾವು

12/04/2026 4:18 PM
State News
KARNATAKA

ನಾಳೆಯಿಂದ ಬೆಂಗಳೂರಿನ ಪೀಣ್ಯ ಫ್ಲೈಓವರ್ 4 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ

By kannadanewsnow0912/04/2026 3:53 PM KARNATAKA 1 Min Read

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲೆ ಏಪ್ರಿಲ್ 13…

ಹೆಂಡತಿಯನ್ನು ನೋಡಿ ಬೊಗಳಿದ್ದಕ್ಕೆ ಸಾಕು ನಾಯಿಯ ಮೇಲೆ ಕ್ರೌರ್ಯ: ಬೆಂಗಳೂರಿನಲ್ಲಿ ವ್ಯಕ್ತಿಯ ಅಮಾನವೀಯ ಕೃತ್ಯ!

12/04/2026 3:50 PM

ಸಾವಿನಲ್ಲೂ ಸಾರ್ಥಕತೆ: ಐವರ ಬಾಳಿಗೆ ‘ಬೆಳಕಾದ’ ಹಾಸನದ ಮೋನಿಕಾ

12/04/2026 3:42 PM

ಅಪಘಾತದಿಂದ ಬ್ರೈನ್ ಡೆಡ್ ಆಗಿದ್ದ ಯುವತಿಯ ಅಂಗಾಂಗ ದಾನ : ಮಗಳ ಸಾವಲ್ಲೂ ಸಾರ್ಥಕತೆ ಮೆರೆದ ಪೋಷಕರು!

12/04/2026 3:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.