ಮೈಸೂರು : ರಾಜ್ಯ ಬಿಜೆಪಿಯ ಆಂತರಿಕ ಹಾಗೂ ಬಣ ಬಡಿದಾಟ ಇದೀಗ ಬೀದಿಗೆ ಬಂದಿದ್ದು, ಒಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೆ, ಇನ್ನು ಇತ್ತ ಬಿವೈ ವಿಜಯೇಂದ್ರ ಬೆಂಬಲಿಗರಾದಂತಹ ಎಂ.ಪಿ ರೇಣುಕಾಚಾರ್ಯ, ಬಿಸಿ ಪಾಟೀಲ್ ಸೇರಿದಂತೆ ಹಲವರು ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ. ಕಾದು ನೋಡಿ ಯತ್ನಾಳ್ ಪಕ್ಷದಿಂದ ಉಚ್ಚಾಟನೆ ಆಗ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಮೈಸೂರಿನಲ್ಲಿ ಎಂಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದು, ಯತ್ನಾಳ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ. ಈ ಕೆಲಸ ಅತಿ ಶೀಘ್ರದಲ್ಲಿ ಆಗುತ್ತದೆ ನಮ್ಮ ಪಕ್ಷದಲ್ಲಿ ಆಂತರಿಕ ಶತ್ರುಗಳ ಸಂಖ್ಯೆ ಜಾಸ್ತಿಯಾಗಿದೆ. ಶತ್ರುಗಳ ನಾಶ ಆಗಲೇಬೇಕು ಅದಕ್ಕಾಗಿ ಪೂಜೆ ಮಾಡಿದ್ದೇವೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಯತ್ನಾಳ್ ಉಚ್ಚಾಟನೆ ಆಗುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಿಳಿಸಿದರು.
ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಪಕ್ಷದ ಆಂತರಿಕ ಅಂದರೆ ಪಕ್ಷದಲ್ಲಿರುವ ದುಷ್ಟ ಶಕ್ತಿಗಳು ಹಾಗೂ ಕಾಂಗ್ರೆಸ್ ನಲ್ಲಿರುವ ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವಂತೆ ದೇವಿಗೆ ಪೂಜೆ ಮಾಡಿದ್ದೇವೆ. ಹಾಗಾಗಿ ಕಾದು ನೋಡಿ ಶೀಘ್ರದಲ್ಲಿ ಶಾಸಕ ಯತ್ನಾಳ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ ಎಂದು ತಿಳಿಸಿದರು.
ಇನ್ನು ಬಿಸಿ ಪಾಟೀಲ್ ಮಾತನಾಡಿ ಯತ್ನಾಳ್ ಅವರು ನಿಜವಾಗಿ ಹೇಳಬೇಕೆಂದರೆ ಕಾಂಗ್ರೆಸ್ ಪಕ್ಷದ ವಿರುದ್ಧ ದಾಳಿ ಮಾಡಬೇಕು ಅದನ್ನು ಬಿಟ್ಟು, ಬಿಎಸ್ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ವಿರುದ್ಧ ದಾಳಿ ಮಾಡಿದರೆ ಅವರಿಗೆ ಹೆಚ್ಚಿನ ಪಬ್ಲಿಸಿಟಿ ಸಿಗುತ್ತದೆ ಎಂದು ಈ ರೀತಿ ದಾಳಿ ಮಾಡುತ್ತಿದ್ದಾರೆ. ಇದು ಕಾರ್ಯಕರ್ತರಿಗೆ ಬಹಳ ಗೊಂದಲ ಸೃಷ್ಟಿಯಾಗಿದೆ.
ನಮ್ಮ ಪಕ್ಷದ ಒಳಗೆ ಮತ್ತು ಹೊರಗೆ ಶತ್ರುಗಳ ಕಾಟ ಶುರುವಾಗಿದೆ. ಶತ್ರು ಸಂಹಾರಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ್ಯಕ್ಷರಿಗೆ ತೊಂದರೆ ಕೊಡುತ್ತಿರುವ ಶತ್ರುಗಳ ನಾಶಕ್ಕೆ ಪೂಜೆ ಸಲ್ಲಿಸಿದ್ದೇನೆ. ನಿಶ್ಚಿತವಾಗಿ ಶತ್ರುಗಳ ನಾಶ ಆಗಿ ಆಗುತ್ತದೆ. ಬಸನಗೌಡ ಯತ್ನಾಳ್ ಬೆಂಬಲಿಗರೆ ಇಲ್ಲದ ಒಬ್ಬ ನಾಯಕ. ಬೈದುಕೊಂಡು ನಾನು ನಾಯಕ ಆಗುತ್ತೇನೆ ಅಂದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.