Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Highlights
KARNATAKA

ಹೀಗಿದೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Highlights

By kannadanewsnow09

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ವಿವಿ ಚಾನ್ಸಲರ್ ಆಗಿ ರಾಜ್ಯಪಾಲರಿಗೆ ಇದ್ದಂತ ಅಧಿಕಾರವನ್ನು ಮೊಟಕಗೊಳಿಸಿ, ಮುಖ್ಯಮಂತ್ರಿಗೆ ನೀಡುವುದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ರಾಜ್ಯಪಾಲರಿಗೆ ಮರು ಪ್ರಾಸಿಕ್ಯೂಷನ್ ಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದಷ್ಟೇ ಅಲ್ಲದೇ ಇನ್ನೂ ಏನೇನು ನಿರ್ಧಾರ ಕೈಗೊಳ್ಳಲಾಯಿತು ಎನ್ನುವ ಪ್ರಮುಖ ಹೈಲೈಟ್ಸ್ ಮುಂದೆ ಓದಿ.

ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಂದಿ ಒಂಭತ್ತು ಬಿಲ್ ಗಳನ್ನ ಸಂಪುಟ ಅಂಗೀಕರಿಸಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ, 20:40: 20 ಇದ್ದ ಕಲ್ಯಾಣ ನಿಧಿ ರೂಪ 50:100: 50,ವಿಧಾನಕ್ಕೆ ಬದಲಾಗಲಿದೆ. ಕಂಪನಿ ಕಡೆ ವ್ಯಾಲ್ಯೂ ಹೆಚ್ಚು ಸಿಗಲಿದೆ ಎಂದರು.

ಕರ್ನಾಟಕ ಅಂತರ್ಜಲ ನಿಯಮಾವಳಿ ಅಭಿವೃದ್ಧಿ ಹಾಗೂ ನಿಯಮಾವಳಿ ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ. ಕೊಳವೆ ಬಾವಿ ಕೊರೆದು ನೀರು ಸಿಗದ ಸನ್ನಿವೇಶದಲ್ಲಿ ಅಂತಹ ಬೋರ್ ಗಳನ್ನ ಮುಚ್ಚೋದನ್ನ ಕಡ್ಡಾಯಗೊಳಿಸುವ ನಿಯಮ ಜಾರಿಗೊಳಿಸಲಾಗುತ್ತದೆ ಎಂದರು.

ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕ 2024ಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಖಾಸಗಿ ಯೂನಿವರ್ಸಿಟಿಗೆ ಸರ್ಕಾರಿ ಅಧಿಕಾರಿ ನಿಯೋಜನೆಗೆ ಅವಕಾಶ ಮಾಡಿಕೊಡಲಿದೆ. ಉಳಿದ ವಿವಿಗಳಲ್ಲಿ ಈ ನಿಯಮ ಪಾಲನೆಯಲ್ಲಿತ್ತು. ಆದರೆ ಚಾಣಕ್ಯ ದಲ್ಲಿ ಈ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಈ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯಪಾಲರ ಬದಲು ಸಿಎಂ ಅವರನ್ನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿವಿ ಗೆ ಚಾನ್ಸಲರ್ ಆಗಿ ನಿಯೋಜಿಸುವ ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಯುನಿವರ್ಸಿಟಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ರಾಜ್ಯಪಾಲರು ಇಷ್ಟು ದಿನ ಚಾನ್ಸೆಲರ್ ಆಗಿದ್ದರು. ಸಿಎಂ ಇನ್ನು ಮುಂದೆ ಚಾನ್ಸಲರ್ ಆಗಲಿದ್ದಾರೆ. ರಾಜ್ಯಪಾಲರ ಬಳಿ ಇದ್ದ ಅಧಿಕಾರವನ್ನು ಹಿಂಪಡೆದು ಮುಖ್ಯಮಂತ್ರಿಗಳಿಗೆ ನೀಡುವುದಕ್ಕೆ ಕ್ಯಾಬಿನೆಟ್ ಅನುಮೋದಿಸಿದೆ ಎಂದರು.

ಕರ್ನಾಟಕ ಪ್ರವಾಸೋಧ್ಯಮ ರೋಪ್ ವೇ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ರೋಪ್ ವೇ ಕಾರ್ಯ ಯೋಜನೆ ಹಾಗೂ ಸುರಕ್ಷತಾ ಜವಾಬ್ದಾರಿ ಹೊಣೆಗಾರಿಕೆಯನ್ನ ಒಳಗೊಂಡ ವಿಧೇಯಕವಾಗಿದೆ. ರಾಜ್ಯದ 12 ಕಡೆ ರೋಪ್ ವೇ ನಿರ್ಮಾಣದ ತಯಾರಿ ನಡೆದಿದೆ ಎಂದರು.

ಲಲಿತ್ ಮಹಲ್ ಹೋಟೆಲ್ ನಿರ್ವಹಣೆಗೆ ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಲಾಗಿದೆ. ಸರ್ಕಾರದ ಬದಲು ಮುಂದೆ ಖಾಸಗಿಯವರಿಂದ ಹೊಟೇಲ್ ನಿರ್ವಹಣೆಗೆ ಅವಕಾಶ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಈಗ ಕೆಎಸ್ ಟಿಡಿಸಿ ಹಾಗೂ ಅರಣ್ಯ ಇಲಾಖೆ ಇದರ ನಿರ್ವಹಣೆ ಮಾಡಲಾಗ್ತಿದೆ ಎಂದು ತಿಳಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಗೆ ರಾಜ್ಯಪಾಲರನ್ನ ಕೋರಲು ನಿರ್ಧರಿಸಲಾಗಿದೆ. ಬಿಎಸ್ ವೈ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದ ದೂರು. 2020ರ ನವೆಂಬರ್ ನಲ್ಲಿ ಟಿ ಜೆ ಅಬ್ರಹಾಂ ಎಸಿಬಿಗೆ ದೂರು ನೀಡಿದ್ರು. ಕ್ರಮಕ್ಕೆ ರಾಜ್ಯಪಾಲರನ್ನ ಕೋರಿದ್ರು. ಅದರೆ ಗವರ್ನರ್ ಅದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈಗ ಸರ್ಕಾರ ಇದರ ತನಿಖೆಗೆ ಒಪ್ಪಿಗೆ ನೀಡುವಂತೆ ಗವರ್ನರ್ ಗೆ ಮರು ಮನವಿ ಮಾಡಲು ನಿರ್ಧಾರಿಸಲಾಗಿದೆ ಎಂದರು.

ವರದಿ: ವಸಂತ ಬಿ ಈಶ್ವರಗೆರೆ

ರಾಜ್ಯದ ‘ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ‘ಕೌಶಲ್ಯಾಭಿವೃದ್ಧಿ ತರಬೇತಿ’ಗೆ ಅರ್ಜಿ ಆಹ್ವಾನ – Kannada News | India News | Breaking news | Live news | Kannada | Kannada News | Karnataka News | Karnataka News

Good News: ದಕ್ಷಿಣ ಮಧ್ಯ ರೈಲ್ವೆ 10 ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ರೈಲಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ – Kannada News | India News | Breaking news | Live news | Kannada | Kannada News | Karnataka News | Karnataka News

‘ಸ್ವ-ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ‘ಡ್ರೋನ್ ತರಬೇತಿ’ ಪಡೆಯಲು ಅರ್ಜಿ ಆಹ್ವಾನ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

1 Min Read

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

2 Mins Read

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

2 Mins Read
Recent News

ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

State News
KARNATAKA

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

By kannadanewsnow57 KARNATAKA 1 Min Read

ಚಿತ್ರದುರ್ಗ: ಕರ್ನಾಟಕದ ಜನಪ್ರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ…

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.