ಬೆಂಗಳೂರು: ಜನವರಿ 1, 2025 ರಿಂದ ಜಾರಿಗೆ ಬರುವಂತೆ ದಕ್ಷಿಣ ಮಧ್ಯ ರೈಲ್ವೆ ತನ್ನ ಒಡೆತನದ ಹತ್ತು ಪ್ಯಾಸೆಂಜರ್ ವಿಶೇಷ ರೈಲುಗಳನ್ನು ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಮರು ಸಂಖ್ಯೆ ನೀಡಲು ಅಧಿಸೂಚನೆ ಹೊರಡಿಸಿದೆ. ಬದಲಾವಣೆಗಳ ವಿವರಗಳು ಈ ಕೆಳಗಿನಂತಿವೆ:
1. ಗುಂತಕಲ್-ಹಿಂದೂಪುರ-ಗುಂತಕಲ್ ರೈಲು ಸಂಖ್ಯೆ 07693/07694 ಈಗ 77213/77214 ಎಂದು ಮರುಸಂಖ್ಯೆ ನೀಡಲಾಗಿದೆ.
2. ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ರೈಲು ಸಂಖ್ಯೆ 07657/07658 ಈಗ 57401/57402 ಎಂದು ಮರುಸಂಖ್ಯೆ ನೀಡಲಾಗಿದೆ.
3. ತಿರುಪತಿ-ಕದಿದೇವರಪಲ್ಲಿ-ತಿರುಪತಿ ರೈಲು ಸಂಖ್ಯೆ 07589/07590 ಈಗ 57405/57406 ಎಂದು ಮರುಸಂಖ್ಯೆ ನೀಡಲಾಗಿದೆ.
4. ಚಿಕ್ಕಜಾಜೂರು-ಗುಂತಕಲ್-ಚಿಕ್ಕಜಾಜೂರು ರೈಲು ಸಂಖ್ಯೆ 07585/07586 ಈಗ 57416/57415 ಎಂದು ಮರುಸಂಖ್ಯೆ ಮಾಡಲಾಗಿದೆ.
5. ವಿಜಯಪುರ-ರಾಯಚೂರು-ವಿಜಯಪುರ ರೈಲು ಸಂಖ್ಯೆ 07663/07664 ಈಗ 57662/57661 ಎಂದು ಮರುಸಂಖ್ಯೆ ಮಾಡಲಾಗಿದೆ.
ಪ್ರಯಾಣಿಕರು ಈ ಮಾರ್ಪಾಡುಗಳನ್ನು ಗಮನದಲ್ಲಿಟ್ಟುಕೊಂಡು ಸುಗಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಬೇಕು.