ರಾಯಚೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಹಾಸ್ಟೆಲ್ ವಾರ್ಡನ್ ಒಬ್ಬರು, ಹಾಸ್ಟೆಲ್ ನಲ್ಲಿ ಇರುವಂತಹ ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಿಸಿಎಂ ಹಾಸ್ಟೆಲ್ ನಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೆಟ್ರಿಕ್ ನಂತರ ಬಿಸಿಎಂ ಬಾಲಕಿಯರ ಹಾಸ್ಟೆಲ್ ಅಲ್ಲಿ ಒಂದು ಘಟನೆ ನಡೆದಿದೆ. ನಿತ್ಯವೂ ಕಾಲೇಜು ವಿದ್ಯಾರ್ಥಿನಿಯರಿಗೆ ವಾರ್ಡನ್ ಕಿರುಕುಳ ನೀಡುತ್ತಿದ್ದಾರೆ. ವಾರ್ಡನ್ ರಜಿಯಾ ಸುಲ್ತಾನ ವಿರುದ್ಧ ಇದೀಗ ವಿದ್ಯಾರ್ಥಿನಿಯರು ಗಂಭೀರವಾದ ಆರೋಪ ಮಾಡಿದ್ದಾರೆ.
ಓದಬೇಕೆಂದು ವಿಧ್ಯಾರ್ಥಿಗಳು ಹೇಳಿದರು ವಾರ್ಡನ್ ಕಿರಿಕಿರಿ ಮಾಡುತ್ತಿದ್ದಾರೆ ಕಿರಿಕಿರಿ ತಾಳಲಾರದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಸ್ಟೆಲಿನ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸ್ಟೂಡೆಂಟ್ಸ್ ಅಳಲು ತೋಡಿಕೊಂಡಿದ್ದಾರೆ. ಸದ್ಯ ಶೌಚಾಲಯ ತೊಳಿಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.