ತುಮಕೂರು : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಿಪಟೂರು ನಗರದ ಹೊರವಲಯದಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಈಡೇನಹಳ್ಳಿ ಪಾಳ್ಯ ನಿವಾಸಿ ಎನ್.ಚೇತನ್ (35) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹಾಲ್ಕುರಿಕೆ ರಸ್ತೆಯ ಧನಲಕ್ಷ್ಮಿ ಕೋಕೋ ನೆಟ್ ಫ್ಯಾಕ್ಟರಿ ಬಳಿ ಶವ ಪತ್ತೆಯಾಗಿದೆ.
ತಿಪಟೂರು ಈಡೇನಹಳ್ಳಿ ಪಾಳ್ಯ ನಿವಾಸಿ ಚೇತನ್ ತಿಪಟೂರು ನಗರದ ಗುಬ್ಬಿ ಲೇಔಟ್ನಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಿದ್ದ ಚೇತನ್ ಸ್ವಂತ ಲಾರಿ ಹೊಂದಿದ್ದ ಇವರು, ತಿಪಟೂರಿನ ಕಾರ್ಖಾನೆಗಳಿಂದ ತೆಂಗಿನಕಾಯಿ ಸರಬರಾಜು ಮಾಡುತ್ತಿದ್ದರು. ಈ ನಡುವೆ ಆಲೂರು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ನಿರ್ಧರಿಸಿದ್ದರು.
ನಿನ್ನೆ ಪಾನಮತ್ತನಾದ ಚೇತನ್, ತಿಪಟೂರು ತಾಲೂಕಿನ ಹಾಲ್ಕುರಿಕೆ ರಸ್ತೆ ಧನಲಕ್ಷ್ಮಿ ಕಾಯಿ ಪ್ಯಾಕ್ಟರಿ ಬಳಿ ಇರುವ ಯುವತಿಯ ತಂದೆ ಲೋಕೇಶಪ್ಪ ಅವರ ಬಳಿ ಹೋಗಿ ನಿಮ್ಮ ಮಗಳನ್ನು ಕೊಡಿ ಮದುವೆಯಾಗುತ್ತೇನೆ ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಅವರು, ನಿನಗೆ ನನ್ನ ಮಗಳನ್ನು ಕೊಡುವುದಿಲ್ಲ ಎಂದಿದ್ದಾರೆ.
ಈ ವಿಚಾರವಾಗಿ ಚೇತನ್ ಹಾಗೂ ಯುವತಿಯ ತಂದೆ ತಾಯಿಯ ನಡುವೆ ಗಲಾಟೆ ನಡೆದಿದೆ. ಕೊಲೆಯ ಪ್ರಕರಣವನ್ನು ಕಲಿಸಿಕೊಂಡು ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ. ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್, ಹೊನ್ನವಳ್ಳಿ ಸಬ್ ಇನ್ಸ್ಪೆಕ್ಟರ್ ರಾಜೇಶ್ ಹಾಗೂ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.