ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಲೇ ಇವೆ. ಇದೀಗ ಇಂದು ಸ್ಕೂಟರ್ ಗೆ ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಸವಾರನೊಬ್ಬ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಮೆಜೆಸ್ಟಿಕ್ ನಿಂದ ಸಿಕೆಪಾಳ್ಯ ಕಡೆಗೆ ಬಿಎಂಟಿಸಿ ಬಸ್ ಹೊರಟಿತ್ತು. ಕೆ ಆರ್ ಸರ್ಕಲ್ ಇಂದ ನೃಪತುಂಗ ರೋಡ್ ನಲ್ಲಿ ಸವಾರ ಬರುತ್ತಿದ್ದ, ಈ ವೇಳೆ ಸ್ಕೂಟರಿಗೆ ಸೈಡ್ ಬಿಡಲಿಲ್ಲ ಎನ್ನುವ ಕಾರಣಕ್ಕೆ ಬಿಎಂಟಿಸಿ ಚಾಲಕ ಕುಶಾಲ್ ಕುಮಾರ್ ಎನ್ನುವವರ ಮೇಲೆ ಸ್ಕೂಟರ್ ಸವಾರ ಹಲ್ಲೆ ಮಾಡಿದ್ದಾನೆ. ಬಳಿಕ ಬಸ್ ಚಾಲಕ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಎಂಟಿಸಿ ಬಸ್ ಚಾಲಕ ಕುಶಾಲ್ ಕುಮಾರ್ ಅವರ ಕೊರಳಪಟ್ಟಿಗೆ ಕೈಹಾಕಿ ಹಲ್ಲೆ ಮಾಡಿದ್ದಾನೆ. ಕುತ್ತಿಗೆ ಹಾಗೂ ಕೈ ಮತ್ತು ದೇಹದ ಹಲವು ಭಾಗಗಳ ಮೇಲೆ ಹಲ್ಲೆ ಮಾಡಿದ್ದು ಚಾಲಕನಿಗೆ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಘಟನೆ ಕುರಿತಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ FIR ದಾಖಲಾಗಿದೆ.