ಹಾವೇರಿ: ಜಿಲ್ಲೆಯಲ್ಲಿ ಸರ್ಕಾರಿ ಬಸ್ ಒಂದು ವೃದ್ಧನ ಮೇಲೆ ಹರಿದ ಪರಿಣಾಮ ಆತನ ಎರಡು ಕಾಲುಗಳು ಕಟ್ ಆಗಿರುವುದಾಗಿ ತಿಳಿದು ಬಂದಿದೆ. ಕಾಲು ಕಳೆದುಕೊಂಡ ವೃದ್ಧ ಬಸ್ ನಿಲ್ದಾಣದಲ್ಲೇ ನರಳಾಡುತ್ತಿದ್ದದ್ದು ಕಂಡು ಬಂದಿದೆ.
ಹಾವೇರಿ ನಗರ ಬಸ್ ನಿಲ್ದಾಣಕ್ಕೆ 60 ವರ್ಷದ ಕರಿಯಪ್ಪ ಮುಚ್ಚಿನಕೊಪ್ಪ ಎಂಬುವರು ತಮ್ಮ ಮಗಳ ಊರಿಗೆ ತೆರಳೋದಕ್ಕೆ ಆಗಮಿಸಿದ್ದರು. ಹಾವೇರಿ ತಾಲೂಕಿನ ಕನಕಾಪುರ ನಿವಾಸಿಯಾಗಿದ್ದಂತ ಇವರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ.
ಹಾವೇರಿ ಬಸ್ ನಿಲ್ದಾಣದಲ್ಲೇ ಸಾರಿಗೆ ಬಸ್ ವೃದ್ಧ ಕರಿಯಪ್ಪನ ಎರಡು ಕಾಲುಗಳ ಮೇಲೆ ಅಪಘಾತದ ನಂತ್ರ ಹರಿದ ಕಾರಣ, ಎರಡು ಕಾಲುಗಳು ಕಟ್ ಆಗಿದ್ದಾವೆ. ನಿಲ್ದಾಣದಲ್ಲೇ ರಕ್ತದ ಮುಡುವಿನಲ್ಲಿ ಕೆಲಸ ಸಮಯ ಒದ್ದಾಡಿದ್ದಾರೆ.
ಸ್ಥಳೀಯರು ವೃದ್ಧ ಕರಿಯಪ್ಪ ಮುಚ್ಚಿನಕೊಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕನಕಾಪುರ ಗ್ರಾಮದ ಗ್ರಾಮಸ್ಥರು ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನೂ ಸಾರಿಗೆ ಬಸ್ ಚಾಲಕ ಮಲ್ಲಿಕ್ ಸಾಬ್ ನನ್ನು ಹಾವೇರಿ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.