ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಆಗಲಿದೆ ಎಂದು ತಿಳಿದುಬಂದಿದೆ. ಐಟಿ, ಜಿಎಸ್ ಟಿ ಇರುವ 10 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಇದೀಗ ಬೀದಿಬದಿ ಅಂಗಡಿ ವ್ಯಾಪಾರಗಳಿಗೂ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.
ಹೌದು ಬ್ಯಾಂಕ್ ವಹಿವಾಟು ಆಧಾರದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಬದಲಾವಣೆ ಮಾಡಲಾಗಿದೆ. ಸದ್ಯ ಬಿಪಿಎಲ್ ಕಾರ್ಡ್ ಇದ್ದಿದ್ದನ್ನು ಎಪಿಎಲ್ ಆಗಿ ಬದಲಾವಣೆ ಮಾಡಲಾಗಿದೆ. ಎಪಿಎಲ್ ಆಗಿ ಬದಲಾವಣೆಯಾಗಿದ್ದಕೆ ಇದೀಗ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ.
ನಮ್ಮದು ದಿನಾಲೂ ನಡೆಯುವ ವ್ಯವಹಾರ ಇರುವ ಕಾರಣ ಹೆಚ್ಚಿಗೆ ಹಣ ಟ್ರಾನ್ಸ್ಆಕ್ಷನ್ ಆಗಿದೆ. ಆದರೆ ನಮಗೆ ಲಾಭದಲ್ಲಿ ಅಗಲಿ ಅಥವಾ ಆದಾಯದಲ್ಲಿ ಅಗಲಿ ಯಾವುದೇ ರೀತಿಯ ಹೆಚ್ಚಳವಿಲ್ಲ. ವಹಿವಾಟು ಆಧಾರದ ಮೇಲೆ ಬದಲಾವಣೆ ಮಾಡಬಾರದು ಎಂದು ವ್ಯಾಪಾರಗಳು ಅಗ್ರಹಿಸಿದ್ದಾರೆ.