ಬೆಂಗಳೂರು : ಬೆಂಗಳೂರಿನಲ್ಲಿ ಲಾಡ್ಜ್ ಒಂದರಲ್ಲಿ ಮಾಲ್ಡಿವ್ ದೇಶದ ಪ್ರಜೆಯ ಶವ ಪತ್ತೆಯಾಗಿದ್ದು, ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಲಾಡ್ಜ್ ನಲ್ಲಿ ಮಾಲ್ಡಿವ್ಸ್ ದೇಶದ ಪ್ರಜೆ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹಸನ್ ಸುಹೈಲ್ (43) ಎಂದು ಗುರುತಿಸಲಾಗಿದೆ. ಆದರೆ ಈ ಒಂದು ಸಾವಿಗೆ ಕಾರಣ ಮಾತ್ರ ಇದುವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನವೆಂಬರ್ 10ರಂದು ಸುಹೈಲ್ ಬೆಂಗಳೂರಿಗೆ ಆಗಮಿಸಿದ್ದರು ಈ ವೇಳೆ ಅವರು ಆರ್ ಟಿ ನಗರದ ಲಾಡ್ಜ್ ಒಂದನ್ನು ಬುಕ್ ಮಾಡಿ ಅಲ್ಲಿ ತಂಗಿದ್ದರು.ಭಾರತದ ಪ್ರವಾಸಕ್ಕೆ ಎಂದು ಸ್ವಹಲ್ ಬೆಂಗಳೂರಿಗೆ ಆಗಮಿಸಿದ್ದರು. ನವೆಂಬರ್ 12 ರಂದು ಲಾಡ್ಜ್ ನ ಸಿಬ್ಬಂದಿ ಸುಹೈಲ್ ಅವರನ್ನು ಕೊನೆಯ ಬಾರಿಗೆ ನೋಡಿದ್ದಾರೆ.ಅದಾದ ಬಳಿಕ ಅವರು ರೂಮಿನಿಂದ ಹೊರಗಡೆ ಬಾರದೇ ಇದ್ದದ್ದನ್ನು ಗಮನಿಸಿದ ಸಿಬ್ಬಂದಿ ಬಾಗಿಲು ಬಡಿದಿದ್ದಾರೆ.
ಇದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳ ಹೋದಾಗ ರೂಮಿನ ಹಾಲ್ನಲ್ಲಿ ಸುಹೈಲ್ ಮೃತದೇಹವಿತ್ತು. ಬಳಿಕ ಸುಹೈಲ್ ಮೃತದೇಹ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿದೆ. ಮೃತನ ವಿವರ ಕೋರಿ ಇಮಿಗ್ರೇಷನ್ ಹಾಗೂ ರಾಯಭಾರಿ ಕಚೇರಿಗಳಿಗೆ ಪತ್ರ ಬರೆಯಲಾಗಿದೆ. ಘಟನೆ ಕುರಿತು ಪ್ರಕರಣದ ಕಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.