ಮೈಸೂರು : ನಮ್ಮ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯವರು ಕಾಂಗ್ರೆಸ್ ಐವತ್ತು ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರು. ಆದರೆ ನಮ್ಮ ಶಾಸಕರು ಯಾವುದೇ ಹಣದ ಆಮಿಷಕ್ಕೆ ಬಗ್ಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೋಟಕವಾದ ಹೇಳಿಕೆ ನೀಡಿದರು.
ನಿನ್ನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ಸಿನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಿದರು ಆದರೆ ನಮ್ಮ ಶಾಸಕರು ಯಾವುದಕ್ಕೂ ಬಗ್ಗಲಿಲ್ಲ ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಾಳಹಳ್ಳಿ ಗ್ರಾಮದಲ್ಲಿ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದರು.
ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕ ಜನ ಸುಮ್ಮನೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ನನ್ನ ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಉರಿ. ಬಡವರ ಪರ ಕೆಲಸ ಮಾಡುತ್ತೇನೆ ಅಂತ ನನ್ನನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಸಚಿವ, ಡಿಸಿಎಂ, ಪ್ರತಿಪಕ್ಷ ನಾಯಕ, ಸಿಎಂ ಕೂಡ ಆಗಿದ್ದೇನೆ.
14 ಸೈಟ್ ಗಾಗಿ ರಾಜಕಾರಣ ಮಾಡಬೇಕಿತ್ತಾ? ನನ್ನ ವಿರುದ್ಧ ಕೆಸ್ ಹಾಕಿಸಿ ಸರ್ಕಾರ ಬೀಳಿಸಲು ಯೋಚಿಸುತ್ತಿದ್ದಾರೆ. ಜನರು ಮೂರ್ಖರು ಅಂತ ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಜನರ ಬೆಂಬಲ ಇರುವವರೆಗೆ ಯಾವ ಕೇಸ್ಗು ಜಗ್ಗಲ್ಲ ಬಗ್ಗಲ್ಲ ಬಿಜೆಪಿಯವರು ಚರ್ಚೆಗೆ ಬರಲಿ ನಮ್ಮ ತಪ್ಪು ಏನೆಂದು ತೋರಿಸಲಿ ನೀವೆಲ್ಲರೂ ನನ್ನ ಜೊತೆ ನಿಲ್ಲಬೇಕು. ಜಾತಿ ಧರ್ಮ ಬಿಟ್ಟು ಅಭಿವೃದ್ಧಿ ಮಾಡುವವರ ಜೊತೆ ನೀವು ಇರಬೇಕು ಎಂದು ತಿಳಿಸಿದರು.