ರಾಮನಗರ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆದಿದ್ದು, ಇದೀಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಇವಿಎಂ ಅದಲು ಬದಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು EVM ಮಷಿನ್ ಅದಲು ಬದಲು ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಮರು ಮತದಾನ ನಡೆಸುವಂತೆ ಮತಗಟ್ಟೆ ಸಂಖ್ಯೆಯ 76ರ ಬಳಿ ಪ್ರತಿಭಟನೆ ನಡೆಯಿತು. ಇವಿಎಂ ಅದಲು ಬದಲಾಗಿದೆ ಎಂದು ಮತದಾರರು ಆರೋಪಿಸಿದ್ದಾರೆ. 1ರಿಂದ ಶುರುವಾಗಬೇಕಿದ್ದ ಕ್ರಮ ಸಂಖ್ಯೆ 17ರಿಂದ ಆರಂಭವಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮತಕಟ್ಟೆಯ ಬಳಿ ಗಲಾಟೆ ಮಾಡುತ್ತಿದ್ದ ಕೆಲವರನ್ನು ಪೊಲೀಸರು ಚದುರಿಸಿದ್ದಾರೆ.