ಉತ್ತರಕನ್ನಡ : ಹಳಿಯಾಳ ಸಕ್ಕರೆ ಕಾರ್ಖಾನೆಯಿಂದ ಕಬ್ಬು ದರ ನಗದಿ ವಿಚಾರವಾಗಿ ಆರ್ ವಿ ದೇಶಪಾಂಡೆ ರೈತ ಮುಖಂಡರ ಮಧ್ಯೆ ಜಟಾಪಟಿ ಮುಂದುವರೆದಿದೆ. ಸಕ್ಕರೆ ಕಾರ್ಖಾನೆ ಅಬ್ಬರ ಆರ್ ವಿ ದೇಶಪಾಂಡೆ ಬ್ಯಾಟಿಂಗ್ ಮಾಡಿದ್ದರು. ಅಲ್ಲದೇ ಹೋರಾಟಗಾರರು ಮೊದಲು ತಮ್ಮ ಮುಖ ನೋಡಿಕೊಳ್ಳಲಿ ಅಂತ ಹೇಳಿಕೆಯನ್ನು ನೀಡಿದ್ದರು.
ಇದೀಗ ರೈತ ಮುಖಂಡರು ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದಕ್ಕೆ ನಾವು ಹೋರಾಡುತ್ತಿದ್ದೇವೆ ಎಂದು ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ್ ತಿಳಿಸಿದರು. ಇದೆ ವೇಳೆ ಹಿರಿಯ ರೈತ ಮುಖಂಡ ನಾಗೇಂದ್ರ ಜಿಯೋಜಿ ಮಾತನಾಡಿ ಒಳ್ಳೆಯ ದರ ಸಿಗಲು ಹೋರಾಟ ಮಾಡುವುದು ನಮ್ಮ ಹಕ್ಕಾಗಿದೆ ಎಂದರು.
ರೈತರು ಕಾರ್ಖಾನೆಯವರ ಹೋರಾಟದಲ್ಲಿ ನೀವೇಕೆ ಮಧ್ಯ ಬರುತ್ತಿರಿ? ಕಾರ್ಖಾನೆ ನನಗೆ ಸಂಬಂಧ ಇಲ್ಲ ಎನ್ನುವ ನೀವು ಮಾತನಾಡುವುದೇಕೆ? ನೀವು ಒಬ್ಬ ಶಾಸಕರಾಗಿ ರೈತರ ಪರವಾಗಿ ಮಾತನಾಡಬೇಕಿತ್ತು. ಟೀಕೆ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.