ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಒಂದು ವಾರದಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯ ಕಲ್ಯಾಣ ವಿಭಾಗದಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ವಿಭಾಗದಡಿ ವಿವಿಧ ಯೋಜನೆಗಳಿಗೆ ವಾರದೊಳಗಾಗಿ ಅರ್ಜಿ ಆಹ್ವಾನಿಸಬೇಕು. ಈ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಲು ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಗ್ ವಾಹನ:
ಮಾನ್ಯ ಉಪ ಮುಖ್ಯಮಂತ್ರಿಗಳ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಗ್ ವಾಹನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ಬಗ್ಗೆ ಚರ್ಚೆ ಮಾಡಿ ಅಭಿಪ್ರಾಯ ಪಡೆದ ಬಳಿಕ, ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ಅನಂತರ ಆಯ್ಕೆ ಮಾಡಿ ವಿವಿಧ ಬಗೆಯ ಇ–ವೆಂಡಿಂಗ್ ವಾಹನಗಳನ್ನು ವ್ಯಾಪಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಸಿದ್ದಪಡಸಿ ವ್ಯಾಪಾರಿಗಳ ವಯಕ್ತಿಕ ಬಂಡವಾಳ ಹಾಗೂ ಬಿಬಿಎಂಪಿ ಅನುದಾನ ಸೇರಿ ಇ–ವೆಂಡಿಂಗ್ ವಾಹನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ವಿವಿಧ ಬಗೆಯ ಮಾರಾಟಗಾರರಿಗೆ ಇ-ವೆಂಡಿಗ್ ವಾಹನ:
ತರಕಾರಿ ಮಾರಾಟಗಾರರು, ಹಣ್ಣು ಮಾರಾಟಗಾರರು, ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರು, ಮಣ್ಣಿನ ಮಡಕೆಗಳು ಮಾರಾಟಗಾರರು, ಬಳೆ ಮಾರಾಟಗಾರರು, ಹೂ ಮಾರಾಟಗಾರರು, ಟಾಯ್ಸ್ ಮಾರಾಟಗಾರರು, ಪಾದರಕ್ಷೆ ಮಾರಾಟಗಾರರು, ಕಾಸ್ಮೆಟಿಕ್ಸ್/ಸ್ತ್ರೀ ಪರಿಕರಗಳ ಮಾರಾಟಗಾರರು, ಗಾಗಲ್ಸ್ ಮಾರಾಟಗಾರರು, ಸೆಕೆಂಡ್ ಹ್ಯಾಂಡ್ ಬುಕ್ಸ್ ಮಾರಾಟಗಾರರು, ಪೇಂಟರ್ಸ್/ಪೇಂಟಿಂಗ್ಸ್ ಮಾರಾಟಗಾರರು, ಪ್ರಾಚೀನ ವಸ್ತುಗಳ ಮಾರಾಟಗಾರರು, ಬೆಲ್ಟ್ ಮಾರಾಟಗಾರರು, ವಾಚ್ ಮಾರಾಟಗಾರರು, ಫೋನ್ ಪರಿಕರಗಳ ಮಾರಾಟಗಾರರು, ಮಸಾಲೆ ಪದಾರ್ಥಗಳ ಮಾರಾಟಗಾರರು, ಚಾಯ್ ವಾಲಾ, ಪಾನಿ ಪುರಿ ಸ್ಟಾಲ್‌ಗಳು, ವಡಾಪಾವ್/ಸ್ಯಾಂಡ್‌ವಿಚ್/ಪಿಜ್ಜಾ, ಚೈನೀಸ್ ಫುಡ್, ಸೋಡಾ, ಮ್ಯಾಗಿ ಸೇರಿದಂತೆ ಇನ್ನಿತರೆ ಮಾರಾಟಗಾರರಿಗೆ ಇ-ವೆಂಡಿಗ್ ವಾಹನ ನೀಡಲಾಗುವುದು.
ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ:
ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ, 2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆ, 2020 ರಂತೆ ಪಾಲಿಕೆಯಲ್ಲಿ ನಗರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸುತ್ತಿದೆ.
ಅದರಂತೆ, ವಲಯವಾರು ಸಮೀಕ್ಷಾ ಕಾರ್ಯವನ್ನು 600ಕ್ಕೂ ಹೆಚ್ಚು ಗಣತಿದಾರರ ಮೂಲಕ ಸಮೀಕ್ಷೆ ಮಾಡಲಾಗುತ್ತಿದ್ದು, ಈಗಾಗಲೇ 12495 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ಎಲ್ಲಾ ವಲಯಗಳಲ್ಲಿ ಸಮೀಕ್ಷೆಯ ಮೂಲಕ ಗುರುತಿಸಲಾಗಿದೆ.
ಸಭೆಯಲ್ಲಿ ಸಹಾಯಕ ಆಯುಕ್ತರಾದ ನಾಗಭೂಷನ್ ರಾಜ್ಯಾಧ್ಯಾಕ್ಷರು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಂಗಸ್ವಾಮಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಲಯ ಮಟ್ಟದ ಅಧಿಕಾರಿಗಳು, .ವಿ.ಸಿ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ: ಸಿಎಂ ಸಿದ್ದರಾಮಯ್ಯ
`ಹೃದಯಾಘಾತ’ದಿಂದ ನಿಮ್ಮ ಜೀವ ಉಳಿಸುತ್ತದೆ : ಈ 7 ರೂಪಾಯಿ `RAM ಕಿಟ್’ ಇಟ್ಟುಕೊಳ್ಳಿ!
BREAKING: ನ.20ರಂದು ರಾಜ್ಯಾದ್ಯಂತ ‘ಮದ್ಯ ಮಾರಾಟ ಬಂದ್’ ಫಿಕ್ಸ್ : ಅಧ್ಯಕ್ಷ ಗುರುಸ್ವಾಮಿ ಹೇಳಿಕೆ