ರಾಮನಗರ : ಇಂದಿನ ಯುವಜನತೆಯ ಮನಸ್ಸು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಕ್ಷುಲ್ಲಕ ಕಾರಣಕ್ಕೂ ಕೂಡ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ರಾಮನಗರ ಜಿಲ್ಲೆಯ ಕನಕಪುರದಲ್ಲೂ ಕೂಡ ಅಂತಹ ಘಟನೆ ನಡೆದಿದ್ದು, ಮೊಬೈಲ್ ನೋಡುವ ವಿಚಾರಕ್ಕೆ ಸಹೋದರಿಯರಿಬ್ಬರ ನಡುವೆ ಗಲಾಟೆ ನಡೆದಿದ್ದು ಇದರಲ್ಲಿ ಓರ್ವ ಯುವತಿ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೌದು ಮೊಬೈಲ್ ನೋಡುವ ವಿಚಾರಕ್ಕೆ ಜಗಳವಾಗಿ ಕೆರೆಗೆ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ತಾಲೂಕಿನ ಕೂನೂರು ಗ್ರಾಮದಲ್ಲಿ ನಡೆದಿದೆ. ಕೂನೂರು ಗ್ರಾಮದ ನಿವಾಸಿ ಲಾವಣ್ಯ(17) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಮೊಬೈಲ್ ನೋಡುವ ವಿಚಾರವಾಗಿ ಲಾವಣ್ಯ ತನ್ನ ಸಹೋದರಿಯೊಂದಿಗೆ ಗಲಾಟೆ ಮಾಡಿಕೊಟ್ಟಿದ್ದಾಳೆ.ಇದರಿಂದ ಬೇಸರಗೊಂಡಿದ್ದ ಲಾವಣ್ಯ ಅಜ್ಜಿ ಮನೆಗೆ ಹೋಗುವುದಾಗಿ ತಿಳಿಸಿ ಮನನೊಂದು ಬಳಿಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಕುರಿತಂತೆ ಕನಕಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.