ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸುರಕ್ಷತೆ ಇಲ್ಲದಂತಹ ಆಗಿದೆ. ಎಲ್ಲೆಂದರಲ್ಲಿ ಮಹಿಳೆಯರ ಮೇಲೆ ಯುವತಿರ ಮೇಲೆ ದೌರ್ಜನ್ಯ ಕಿರುಕುಳ ನಡೆಯುತ್ತಲೇ ಇವೆ. ಇದೀಗ ಬೆಂಗಳೂರಿನಲ್ಲಿ ಉತ್ತರ ಭಾರತದ ಇವತಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಈ ಒಂದು ಘಟನೆ ನಡೆದಿದ್ದು, ಬಿಟಿಎಂ ಲೇಔಟ್ ನಲ್ಲಿ ವಾಸವಾಗಿರುವ ಹಿಂದಿ ಭಾಷಿಕ ಯುವತಿ ರಸ್ತೆಯಲ್ಲಿ ಹೋಗುವಾಗ ವಿಡಿಯೋ ಮಾಡುವುದನ್ನು ನೋಡಿದ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನು ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು ಹಾಕಿದ್ದಾಳೆ.
ಯುವಕನಿಂದ ಕಿರುಕುಳಕ್ಕೆ ಒಳಗಾದ ಯುವತಿ ನೇಹಾ ಬಿಸ್ವಾಲ್. ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದ ಈ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ, ತನಗೆ ಇಷ್ಟವಾದಂತಹ ಒಳ್ಳೆ ವಿಡಿಯೋಗಳನ್ನು ವ್ಲಾಗ್ ಮಾಡುತ್ತಾ, ಚೆನ್ನಾಗಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಳು. ಅಲ್ಲದೆ ಇವತ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಜನ ಫಾಲೋವರ್ಸ್ ಕೂಡ ಇದ್ದಾರೆ. ಘಟನೆ ಕುರಿತು ಸಹಜವಾಗಿ ಯುವತಿ ದಂಗಾಗಿ ಹೋಗಿದ್ದು ಬೆಂಗಳೂರಿನಲ್ಲಿ ಸುರಕ್ಷತೆಯ ಕುರಿತು ಆಕ್ರೋಶ ಹೊರಹಾಕಿದ್ದಾಳೆ.
ಆದರೆ ಕಳೆದ ಸೋಮವಾರ ಕೆಲಸವನ್ನು ಮುಗಿಸಿಕೊಂಡು ತನ್ನ ರೂಮಿನತ್ತ ನಡೆದುಕೊಂಡು ಹೋಗುವಾಗ ಬಿಟಿಎಂ ಲೇಔಟ್ನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಿಸುತ್ತಾ ವ್ಲಾಗ್ ಮಾಡುತ್ತಿದ್ದಳು. ಎದುರಿಗೆ ಸೈಕಲ್ನಲ್ಲಿ ಬಂದ ಯುವಕನೊಬ್ಬ ಮೊದಲು ಈ ಯುವತಿಗೆ ಹಾಯ್ ಮಾಡುತ್ತಾನೆ. ನಂತರ, ಆಕೆಯ ಎದೆಗೆ ಕೈ ಹಾಕಿ ಕಿರುಕುಳ ಕೊಟ್ಟು ಪರಾರಿ ಆಗಿದ್ದಾನೆ. ಇನ್ನು ವಿಡಿಯೋದಲ್ಲಿ ಆತನ ಮುಖ ಕಾಣದಂತೆ ತಪ್ಪಿಸಿಕೊಂಡಿದ್ದಾನೆ. ಆದರೆ, ವಿಡಿಯೋದಲ್ಲಿ ಯುವಕ ಎದೆಭಾಗಕ್ಕೆ ಕೈ ಹಾಕಿ ಕಿರುಕುಳ ನೀಡಿರುವುದು ಸಹ ಸೆರೆಯಾಗಿದೆ.
ಒಬ್ಬ ವ್ಯಕ್ತಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ನಾನು ಬ್ಲಾಗಿಂಗ್ ಮಾಡುತ್ತಿದ್ದಾಗ ಸೈಕಲ್ನಲ್ಲಿ ಬಂದು ಕೂಗಿ, ಅಸಭ್ಯವಾಗಿ ಸ್ಪರ್ಶಿಸಿ ಓಡಿಹೋದ ಎಂದು ವಿವರಿಸಿದ್ದಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬಂಟಿಯಾಗಿ ನಡೆಯುವಾಗ ನಿಜವಾಗಿಯೂ ಸುರಕ್ಷಿತವಾಗಿರಬಹುದೇ ಎಂದು ಪ್ರಶ್ನಿಸಿದ್ದಾರೆ. ಯುವತಿಯ ಇನ್ಸ್ಟಾಗ್ರಾಮ್ ಪೋಸ್ಟ್ ಶೀಘ್ರ ವೈರಲ್ ಆಗಿದ್ದು, ಅನೇಕರು ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
An Instagram user, @nehabiswal120, has reported facing sexual harassment in BTM Layout, Bengaluru. She claims that while she was walking down the street, a boy on a bicycle approached her, greeted her with a "hi," and then inappropriately touched her before quickly fleeing the… pic.twitter.com/R6qXDnVUc8
— Karnataka Portfolio (@karnatakaportf) November 6, 2024
BREAKING: ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: FIR ರದ್ದು ಕೋರಿ ‘ಹೈಕೋರ್ಟ್’ಗೆ HDK, ನಿಖಿಲ್ ಅರ್ಜಿ
ಲೋಕಾಯುಕ್ತ ವಿಚಾರಣೆ ವೇಳೆ ಸುಳ್ಳು ಆರೋಪಕ್ಕೆ ಸತ್ಯವನ್ನು ತಿಳಿಸಿದ್ದೇನೆ: ಸಿಎಂ ಸಿದ್ಧರಾಮಯ್ಯ