ಹಾವೇರಿ : ಶಿಗ್ಗಾವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಕುರಿತು ನಾನು ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮಾಡಿರುವ ಆರೋಪಗಳಿಗೆ ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿ, ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಾನು ಖಂಡಿತವಾಗಿಯೂ ಒಂದು ಮನೆ ಕಟ್ಟಿಲ್ಲ ನನ್ನ ಕ್ಷೇತ್ರದಲ್ಲಿ ಐದು ಲಕ್ಷ ರೂಪಾಯಿಯ ಹನ್ನೆರಡುವರೆ ಸಾವಿರ ಮನೆ ಕಟ್ಟಿಸಿದ್ದೇನೆ. ನಿಮ್ಮದೆ ಸರ್ಕಾರ ಇದೆ ದಾಖಲೆ ತೆಗೆದು ನೋಡಿ ಮುಖ್ಯಮಂತ್ರಿಯಾಗಿ ಈ ರೀತಿ ಹಸಿ ಸುಳ್ಳು ಹೇಳುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಜೀವನದ ಹಂಗು ತೊರೆದು ನಮ್ಮ ಸರ್ಕಾರ ಕೊರೊನಾ ಸಂಪೂರ್ಣ ನಿಯಂತ್ರಿಸಲು ಆಸ್ಪತ್ರೆ ಬೆಡ್ ಗಳು, ಆಕ್ಸಿಜನ್ ಕಿಟ್ ಗಳು, , ಔಷಧಿ, ಚುಚ್ಚು ಮದ್ದುಗಳನ್ನು ಮತ್ತು ಕೇವಲ ಎರಡು ಟೆಸ್ಟ್ ಲ್ಯಾಬ್ ಗಳಿದ್ದಿದ್ದನ್ನು ಆರವತ್ತು ಲ್ಯಾಬ್ ಮಾಡಿ ಸಾವಿರಾರು ಜನರ ಪ್ರಾಣ ಉಳಿಸಿರುವುದು ಸಾರ್ವಜನಿಕರಿಗೆ ಗೊತ್ತಿರುವ ವಿಚಾರ. ಈ ಯಶಸ್ಸು ಕಂಡು ಅಸೂಯೆಯಿಂದ ರಾಜಕೀಯ ಪ್ರೇರಿತ ಆರೋಪ ಮಾಡುವುದನ್ನು ಬಿಡಿ, ನನ್ಬ ಸ್ವಂತ ಮನೆಯನ್ನೇ ಕೊವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವುದು ನೂರಾರು ಶಿಗ್ಗಾವಿ ಸವಣೂರು ತಾಲುಕಿನ ಜನರಿಗೆ ಚಿಕಿತ್ಸೆ ಕೊಟ್ಡಿರುವುದು ಜನ ಎಂದೂ ಮರೆಯುದಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ಆಗಿ ಜಲಸಂಪನ್ಮೂಲ ಸಚಿವನಾಗಿ ಶಿಗ್ಗಾವಿ ಏತ ನಿರಾವರಿಯನ್ನು 2008 ಕ್ಕೆ ಪ್ರಾರಂಭಿಸಿ 2012 ರಲ್ಲಿ ಪೂರ್ಣ ಗೊಳಿಸಿದ್ದು ಅಂದಿನ ಸಿಎಂ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದಾರೆ. ಸವಣೂರು ಏತ ನೀರಾವರಿ ನಿಮ್ಮ ಸರ್ಕಾರದಲ್ಲಿ ಮೂರು ವರ್ಷ ಪ್ರಾರಂಭ ಮಾಡದೇ ನಿಷ್ಕ್ರಿಯವಾಗಿತ್ತು. ನೀವು ಕಾಲದ ಹಣಕಾಸು ಬಿಡುಗಡೆ ಮಾಡಿರುವ ದಾಖಲೆಯನ್ನು ತೋರಿಸಿ ನಾವು 2020 ರಿಂದ 23 ರ ವರೆಗೂ ಆ ಯೋಜನೆ ಪುರ್ಣಗೊಳಿಸಿದ್ದೇನೆ.
ನಾನು ಮಂತ್ರಿಯಾಗಿ, ಸಿಎಂ ಆಗಿ ಏನೆಲ್ಲ ಅಭಿವೃದ್ಧಿ ಮಾಡಿದ್ದೇನೆ ಎಂದು ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆ. ನನ್ನ ಅಭಿವೃದ್ದಿ ಶಿಕ್ಷಣ, ಆರೊಗ್ಯ, ರಸ್ತೆ, ಗ್ರಾಮೀಣ ಅಭಿವೃದ್ಧಿ ಕೆರೆ ತುಂಬಿಸುವುದು, ಬ್ರಿಡ್ಜ್ ಗಳ ನಿರ್ಮಾಣ, ಎರಡು ಪಾಲಿಟೆಕ್ನಿಕ್, ಎರಡು ಐಟಿಐ ಕಾಲೇಜು, ಜಿಟಿಟಿಸಿ, ಟೆಕ್ಸ್ ಟೈಲ್ ಪಾರ್ಕ್, ಆಯುರ್ವೇದ ಕಾಲೇಜು ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿಮ್ಮ ಸರ್ಕಾರದ ಬಳಿ ದಾಖಲೆ ಇವೆ. ಇಲ್ಲದಿದ್ದರೆ ನಿಮಗೆ ದಾಖಲೆ ಸಮೇತ ಕಳುಹಿಸಿ ಕೊಡಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ: H.D ಕುಮಾರಸ್ವಾಮಿ ಭವಿಷ್ಯ
ಸೆನ್ಸೆಕ್ಸ್ 1,400 ಅಂಕಗಳ ಕುಸಿತ, ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟ | Share Market Updates
BREAKING : ‘ತೀವ್ರ ಕಳವಳ’ : ಕೆನಡಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ‘ಭಾರತ’ ಖಂಡನೆ