ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಶುರುವಾಗಿದ್ದು ಕ್ಷುಲ್ಲಕ ಕಾರಣಕ್ಕೆ ಬಾರ್ ಒಂದರಲ್ಲಿ ಬಿಲ್ ಪಾವತಿಸುವುದಕ್ಕೆ ಎರಡು ಪುಡಿ ರೌಡಿಗಳ ಗ್ಯಾಂಗ್ ನಡುವೆ ಮಾರಮಾರಿ ನಡೆದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ್ಣದ ಸ್ಮೂಕ ಲಾಂಜ್ ಬಾರ್ ನಲ್ಲಿ ನಿನ್ನೆ ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ.
ಇದೀಗ ಪುಡಿ ರೌಡಿಗಳ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀರಂಗಪಟ್ಟಣದ ಸ್ಮೂಕ ಲಾಂಜ್ ಬಾರ್ ನಲ್ಲಿ ಈ ಒಂದು ಹೊಡೆದಾಟ ನಡೆದಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ದರ್ಶನ್ ಟೀಮ್ ಬಿಲ್ ಕೊಡುವಾಗ ಗಣೇಶ್ ಟೀಮ್ ನಿಂದ ಕಿರಿಕ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ರೌಡಿ ಗಣೇಶ್ ತಂಡ ಜಗಳ ಆರಂಭಿಸಿದೆ.
ಈ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ತಡರಾತ್ರಿ ಒಂದು ಗಂಟೆಯವರೆಗೂ ರೌಡಿಶೀಟರ್ ಗಳ ಪ್ರತ್ಯೇಕ ಪಾರ್ಟಿ ನಡೆದಿತ್ತು. ಈ ಸಂದರ್ಭದಲ್ಲಿ ಗಣೇಶ್ ಎಸೆದ ಬಾಟಲ್ ಹೊಡೆದರಿಂದ ದರ್ಶನ್ ಜಸ್ಟ್ ಮಿಸ್ ಆಗಿದ್ದಾನೆ.ಈ ವೇಳೆ 2 ಗುಂಪುಗಳನ್ನು ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸಿದ್ದಾರೆ. ಶಾಸಕರ ಪ್ರಭಾವಕ್ಕೆ ಮಣಿದು ಪೊಲೀಸರು ರಾಜಿ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.