ಬೆಂಗಳೂರು : ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತ ದೇಹ ಪತ್ತೆಯಾಗಿದ್ದು, ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಒಂದರಲ್ಲಿ ಗೀತಾ (37) ಎನ್ನುವ ಶವ ಪತ್ತೆಯಾಗಿದೆ.
ಪತಿ ಮುರುಳಿನೇ ಕೊಲೆಗೈದು ನೇಣು ಬಿಗಿದಿದ್ದಾರೆ ಎಂದು ಮೃತ ಗೀತಾ ಪೋಷಕರು ಆರೋಪಿಸುತ್ತಿದ್ದಾರೆ. 17 ವರ್ಷಗಳ ಹಿಂದೆ ಮುರುಳಿ ಜೊತೆಗೆ ಮೃತ ಗೀತಾ ವಿವಾಹವಾಗಿದ್ದಳು. ಕಳೆದ ಕೆಲವು ತಿಂಗಳಿನಿಂದ ದಂಪತಿಯ ಮಧ್ಯ ಜಗಳ ನಡೆಯುತ್ತಿತ್ತು.
ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ ತಕ್ಷಣ ಪತಿಯೇ ಮಗಳನ್ನು ನೇಣು ಹಾಕಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಕಾಟನ್ ಪೇಟೆ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.