ಬೆಂಗಳೂರು : ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಹಾಗೂ ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಗಳ ಹೆಸರನ್ನು SATS ತಂತ್ರಾಂಶದಲ್ಲಿ ‘ಆಧಾರ್ ಆದಾಲತ’ ಮೂಲಕ ನವೆಂಬರ 2024ರಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲು ಆಧಾರ್ ಅದಾಲತ್ ಆಯೋಜಿಸಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1), (2) ಮತ್ತು (3) ರಂತೆ ವಿವಿಧ ಸೇವೆಗಳನ್ನು / ಸವಲತ್ತುಗಳನ್ನು ಒದಗಿಸಲು ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಹಾಗೂ ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಗಳ ಹೆಸರನ್ನು SATS ತಂತ್ರಾಂಶದಲ್ಲಿ ‘ಆಧಾರ್ ಆದಾಲತ’ ಮೂಲಕ ನವೆಂಬರ 2024ರಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣವಾಗಿ ಸೆರೆಹಿಡಿಯಲು (100೪) ಯೋಜಿಸಲಾಗಿದೆ.
Section 7 Of Aadhaar Act ರನ್ವಯ ಸರ್ಕಾರಿ ಸವತ್ತುಗಳನ್ನು ಪಡೆಯಲು ಆಧಾರ್ ದೃಢೀಕರಣ ಕಡ್ಡಾಯವಾಗಿರುತ್ತದೆ. ಆಧಾರ್ ನಿಯಮ 4(4)(b)(ii) of Central Aadhaar Act, 2016 ರನ್ವಯ ಸ್ವಯಂಪ್ರೇರಿತ ಒಪ್ಪಿಗೆ ಮೇರೆಗೆ ಆಧಾರ್ ಮೌಲ್ವಿಕರಿಸಲು ತಿಳಿಸಿದೆ.
ಆದುದರಿಂದ ನವೆಂಬರ-2024 ಮಾಹೆಯಲ್ಲಿಯೆ ‘ಆಧಾರ ಆದಾಲತ’ ನಡೆಸುವ ಮೂಲಕ ಕಡ್ಡಾಯವಾಗಿ ಕಲಬುರಗಿ ವಿಭಾಗದ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆಧಾರ್‌ನಲ್ಲಿರುವಂತೆ ವಿದ್ಯಾರ್ಥಿಗಳ ಹೆಸರನ್ನು SATS ಪೂರ್ಣಗೊಳಿಸಲು ಈ ಮೂಲಕ ಸೂಚಿಸಿದೆ.