ನವದೆಹಲಿ : ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಘೋರ ದುರಂತವೊಂದು ಸಂಭವಿಸಿದ್ದು, ನಾಲ್ವರು ಸಜೀವ ದಹನವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಹರಿಯಾಣದ ಗುರುಗ್ರಾಮದ ಸರಸ್ವತಿ ಎನ್ಕ್ಲೇವ್ನ ಜಿ ಬ್ಲಾಕ್ನಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಮೃತರೆಲ್ಲರೂ ಗಾರ್ಮೆಂಟ್ ಕಂಪನಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು.
ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 2:00 ಗಂಟೆಗೆ ಗುರುಗ್ರಾಮ್ನ ಸರಸ್ವತಿ ಎನ್ಕ್ಲೇವ್ನ ಜಿ ಬ್ಲಾಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಗಾರ್ಮೆಂಟ್ ಕಂಪನಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮೃತರನ್ನು ನೂರ್ ಆಲಂ, ಮುಸ್ತಾಕ್, ಅಮನ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಹಾರದ ನಿವಾಸಿಗಳಾಗಿದ್ದರು. ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇವರೆಲ್ಲರ ವಯಸ್ಸು 20 ರಿಂದ 30 ವರ್ಷಗಳು.