ಬೆಂಗಳೂರು: ಕರ್ನಾಟಕದ ತಲಾವಾರು ಜಿಎಸ್ಡಿಪಿಯು ಭಾರತದಲ್ಲೇ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ 2023-24ರ ಹಣಕಾಸು ವರ್ಷದಲ್ಲಿ ನಮ್ಮ ರಾಜ್ಯದ ಆರ್ಥಿಕತೆಯು ಶೇ. 10.2 ರಷ್ಟು ಬೆಳವಣಿಗೆ ಸಾಧಿಸಿ ರಾಷ್ಟ್ರೀಯ ಸರಾಸರಿಯ ಶೇ. 8.2 ಪ್ರಮಾಣವನ್ನು ಮೀರಿಸಿದೆ ಎಂದಿದ್ದಾರೆ.
ರಾಜ್ಯದ ಪ್ರಬಲ ಆರ್ಥಿಕ ಕಾರ್ಯಕ್ಷಮತೆಯ ಸೂಚ್ಯಂಕವನ್ನು ಮೊದಲಿದ್ದ ಶೇ. 4ರಿಂದ ಶೇ. 13.1ಗೆ ಪರಿಷ್ಕರಿಸಲಾಗಿದೆ. ಇದು ರಚನಾತ್ಮಕ ಆಡಳಿತ ಮತ್ತು ವೈವಿಧ್ಯಮಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಕರ್ನಾಟಕವು ಜಿಎಸ್ಟಿ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 10 ಏರಿಕೆ ಕಂಡಿದೆ ಮತ್ತು ಸ್ಟಾಂಪ್ ಡ್ಯೂಟಿ ಆದಾಯದಲ್ಲಿ ಶೇ. 24ರಷ್ಟು ಹೆಚ್ಚಳ ದಾಖಲಿಸಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಅಂಕಿಅಂಶಗಳ ಅಂದಾಜು (NSE) ಪ್ರಕಾರ 2024-25 ಸಾಲಿನಲ್ಲಿ ಜಿಎಸ್ಡಿಪಿ (GSDP)ಬೆಳವಣಿಗೆ ಶೇ. 9.4 ತಲುಪುವ ನಿರೀಕ್ಷೆ ಇದೆ. ಆದರೆ ಹಣಕಾಸು ಸಚಿವಾಲಯದ ವರದಿ ಇನ್ನೂ ಆಶಾವಾದಕವಾಗಿದ್ದು, ಶೇ. 14 ಬೆಳವಣಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ ಎಂಬುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕದ ತಲಾವಾರು ಜಿಎಸ್ಡಿಪಿಯು ಭಾರತದಲ್ಲಿ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜನಪರ ನೀತಿಗಳು, ವ್ಯಾಪಾರ-ಸ್ನೇಹಿ ವಾತಾವರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ. ಇದು ಭಾರತದ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದಿದ್ದಾರೆ.
Karnataka's economy grew by 10.2% in FY 2023-24, surpassing the national average of 8.2%, despite global economic challenges, particularly in the IT and hardware sectors. The state's strong economic performance, revised from an initial projection of 4% to 13.1%, is attributed to…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 22, 2024
ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ 2023-24ರ ಹಣಕಾಸು ವರ್ಷದಲ್ಲಿ ನಮ್ಮ ರಾಜ್ಯದ ಆರ್ಥಿಕತೆಯು ಶೇ. 10.2 ರಷ್ಟು ಬೆಳವಣಿಗೆ ಸಾಧಿಸಿ ರಾಷ್ಟ್ರೀಯ ಸರಾಸರಿಯ ಶೇ. 8.2 ಪ್ರಮಾಣವನ್ನು ಮೀರಿಸಿದೆ. ರಾಜ್ಯದ ಪ್ರಬಲ ಆರ್ಥಿಕ ಕಾರ್ಯಕ್ಷಮತೆಯ ಸೂಚ್ಯಂಕವನ್ನು ಮೊದಲಿದ್ದ ಶೇ. 4ರಿಂದ ಶೇ. 13.1ಗೆ ಪರಿಷ್ಕರಿಸಲಾಗಿದೆ. ಇದು ರಚನಾತ್ಮಕ ಆಡಳಿತ ಮತ್ತು ವೈವಿಧ್ಯಮಯ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ. ಕರ್ನಾಟಕವು ಜಿಎಸ್ಟಿ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಶೇ. 10 ಏರಿಕೆ ಕಂಡಿದೆ ಮತ್ತು ಸ್ಟಾಂಪ್ ಡ್ಯೂಟಿ ಆದಾಯದಲ್ಲಿ ಶೇ. 24ರಷ್ಟು ಹೆಚ್ಚಳ ದಾಖಲಿಸಿದೆ ಎಂದಿದ್ದಾರೆ.
ರಾಷ್ಟ್ರೀಯ ಅಂಕಿಅಂಶಗಳ ಅಂದಾಜು (NSE) ಪ್ರಕಾರ 2024-25 ಸಾಲಿನಲ್ಲಿ ಜಿಎಸ್ಡಿಪಿ (GSDP)ಬೆಳವಣಿಗೆ ಶೇ. 9.4 ತಲುಪುವ ನಿರೀಕ್ಷೆ ಇದೆ. ಆದರೆ ಹಣಕಾಸು ಸಚಿವಾಲಯದ ವರದಿ ಇನ್ನೂ ಆಶಾವಾದಕವಾಗಿದ್ದು, ಶೇ. 14 ಬೆಳವಣಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ.
ಕರ್ನಾಟಕದ ತಲಾವಾರು ಜಿಎಸ್ಡಿಪಿಯು ಭಾರತದಲ್ಲಿ ಅತ್ಯಧಿಕವಾಗಿದೆ, ಇದು ನಮ್ಮ ಸಮರ್ಥ ಆಡಳಿತ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜನಪರ ನೀತಿಗಳು, ವ್ಯಾಪಾರ-ಸ್ನೇಹಿ ವಾತಾವರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ. ಇದು ಭಾರತದ ಡಿಜಿಟಲ್ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ.