Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘IPL ಟಿಕೆಟ್’ಗಾಗಿ ಮುಗಿಬಿದ್ದ ಶಾಸಕರು: ತಲಾ 2 ಟಿಕೆಟ್ ವ್ಯವಸ್ಥೆ ಮಾಡಲು KSCAಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ

27/03/2026 6:11 PM

BREAKING : S-400 ಮತ್ತು Su-30 ಎಂಜಿನ್ಸ್ ಸೇರಿ 2.38 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ‘DAC’ ಅನುಮೋದನೆ

27/03/2026 6:04 PM

‘IPL ಟಿಕೆಟ್‌’ಗಾಗಿ ಶಾಸಕರ ಬೇಡಿಕೆ: KSCA ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದ DCM ಡಿ.ಕೆ.ಶಿವಕುಮಾರ್

27/03/2026 5:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 95ನಿಮಿಷಗಳ ಥ್ರಿಲ್ಲರ್ `ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಅಕ್ಟೋಬರ್ 18ರಂದು ತೆರೆಗೆ…!
FILM

95ನಿಮಿಷಗಳ ಥ್ರಿಲ್ಲರ್ `ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಅಕ್ಟೋಬರ್ 18ರಂದು ತೆರೆಗೆ…!

By kannadanewsnow0715/10/2024 8:23 PM
‘Prakarana Tanikha Hantadallide’
‘Prakarana Tanikha Hantadallide’
‘Prakarana Tanikha Hantadallide’

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಶೀರ್ಷಿಕೆಯ ಕಾರಣದಿಂದ ಆರಂಭಿಕವಾಗಿ ಗಮನ ಸೆಳೆದಿದ್ದ ಚಿತ್ರ `ಪ್ರಕರಣ ತನಿಖಾ ಹಂತದಲ್ಲಿದೆ’. ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ `ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಶೀರ್ಷಿಕೆ ಕೇಳಿದಾಕ್ಷಣವೇ ಒಟ್ಟಾರೆ ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರನ್ನೆಲ್ಲ ಟ್ರೈಲರ್ ಅಚ್ಚರಿಗೀಡುಮಾಡಿತ್ತು. ಹಾಗೆ ಮೂಡಿಕೊಂಡಿದ್ದ ನಿರೀಕ್ಷೆಗಳ ನಡುವೆ ಈ 95 ನಿಮಿಷಗಳ ವಿಶಿಷ್ಟ ಥ್ರಿಲ್ಲರ್ ತೆರೆಗಾಣಲು ದಿನಗಣನೆ ಶುರುವಾಗಿದೆ. 

‘Prakarana Tanikha Hantadallide’
‘Prakarana Tanikha Hantadallide’

ವಿಶೇಷವೆಂದರೆ, ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ. ರಂಗಭೂಮಿಯ ವಾತಾವರಣದಲ್ಲಿಯೇ ಜೀವ ಪಡೆದಿದ್ದ ಈ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ. ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ್ಯಾಕ್, ಪೋಸ್ಟರ್, ಟ್ರೈಲರ್ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂತೆ ಸೂಚಿಸುವುದು ಸತ್ಯ. ಆದರೆ, ಅದೆಲ್ಲದರಾಚೆಗಿನ ಬೆರಗುಗಳನ್ನು 95ನಿಮಿಷಗಳ ಈ ಥ್ರಿಲ್ಲರ್ ಸಿನಿಮಾ ಬಚ್ಚಿಟ್ಟುಕೊಂಡಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

‘Prakarana Tanikha Hantadallide’

ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಮಹೀನ್ ಕುಬೇರ್ ಮುಖ್ಯಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್.ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಮುಂತಾದವರ ತಾರಾಗಣವಿದೆ. ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ, ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ವಿ ಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತನಿಖಾ ಹಂತದಲ್ಲಿರುವ ಪ್ರಕರಣ ಈ ವಾರವೇ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.

‘Prakarana Tanikha Hantadallide’

 

95-minute thriller 'Case under investigation' to be released on October 18 95-minute thriller ‘Prakarana Tanikha Hantadallide’ to be released on October 18
Share. Facebook Twitter LinkedIn WhatsApp Email

Related Posts

ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 ಅಬ್ಬರ : ಮೊದಲ ದಿನವೇ 100 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್ ಚಿತ್ರ!

20/03/2026 8:26 AM1 Min Read

BREAKING : ಪ್ರತಿಷ್ಠಿತ 2026ರ `ಆಸ್ಕರ್ ಪ್ರಶಸ್ತಿ’ ಪ್ರಕಟ : `ಮೈಕೆಲ್ ಬಿ ಜೋರ್ಡಾನ್- ಜೆಸ್ಸಿ ಬಕ್ಲಿ’ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ |Oscars 2026

16/03/2026 8:08 AM2 Mins Read

BREAKING : ಪ್ರತಿಷ್ಠಿತ 2026ರ `ಆಸ್ಕರ್ ಪ್ರಶಸ್ತಿ’ ಪ್ರಕಟ : ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ |Oscars 2026

16/03/2026 6:54 AM1 Min Read
Recent News

‘IPL ಟಿಕೆಟ್’ಗಾಗಿ ಮುಗಿಬಿದ್ದ ಶಾಸಕರು: ತಲಾ 2 ಟಿಕೆಟ್ ವ್ಯವಸ್ಥೆ ಮಾಡಲು KSCAಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ

27/03/2026 6:11 PM

BREAKING : S-400 ಮತ್ತು Su-30 ಎಂಜಿನ್ಸ್ ಸೇರಿ 2.38 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ‘DAC’ ಅನುಮೋದನೆ

27/03/2026 6:04 PM

‘IPL ಟಿಕೆಟ್‌’ಗಾಗಿ ಶಾಸಕರ ಬೇಡಿಕೆ: KSCA ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದ DCM ಡಿ.ಕೆ.ಶಿವಕುಮಾರ್

27/03/2026 5:48 PM

BIG NEWS: ದಾವಣಗೆರೆ ಉಪ ಚುನಾವಣೆ: ಸಿಎಂ ಸಿದ್ಧರಾಮಯ್ಯ ಸಂಧಾನ ಸಕ್ಸಸ್, ಸಾದಿಕ್ ಪೈಲ್ವಾನ್ ನಾಮಪತ್ರ ವಾಪಾಸ್

27/03/2026 5:45 PM
State News
KARNATAKA

‘IPL ಟಿಕೆಟ್’ಗಾಗಿ ಮುಗಿಬಿದ್ದ ಶಾಸಕರು: ತಲಾ 2 ಟಿಕೆಟ್ ವ್ಯವಸ್ಥೆ ಮಾಡಲು KSCAಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮನವಿ

By kannadanewsnow0927/03/2026 6:11 PM KARNATAKA 1 Min Read

ಬೆಂಗಳೂರು: ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಹಾಗೂ ಪಾಸ್‌ಗಳಿಗಾಗಿ ರಾಜ್ಯದ ಶಾಸಕರು ಮತ್ತು ಸಂಸದರಿಂದ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ,…

‘IPL ಟಿಕೆಟ್‌’ಗಾಗಿ ಶಾಸಕರ ಬೇಡಿಕೆ: KSCA ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದ DCM ಡಿ.ಕೆ.ಶಿವಕುಮಾರ್

27/03/2026 5:48 PM

BIG NEWS: ದಾವಣಗೆರೆ ಉಪ ಚುನಾವಣೆ: ಸಿಎಂ ಸಿದ್ಧರಾಮಯ್ಯ ಸಂಧಾನ ಸಕ್ಸಸ್, ಸಾದಿಕ್ ಪೈಲ್ವಾನ್ ನಾಮಪತ್ರ ವಾಪಾಸ್

27/03/2026 5:45 PM

ವ್ಯಾಪಾರ ಸುಧಾರಣೆಗೆ ಕೇಂದ್ರದ ಮಹತ್ವದ ಹೆಜ್ಜೆ: ಲೋಕಸಭೆಯಲ್ಲಿ ‘ಜನ್ ವಿಶ್ವಾಸ್’ ತಿದ್ದುಪಡಿ ಮಸೂದೆ ಮಂಡನೆ | Jan Vishwas

27/03/2026 5:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.