ಬೆಂಗಳೂರು : ಎಚ್ ಡಿ ಕುಮಾರಸ್ವಾಮಿ ಅವರಿಗೆ ನನ್ನನ್ನು ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದರು. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ದೆವ್ವ ಆಗಿದ್ದರೆ ಮಾತ್ರ ಭಯ ಪಡಬೇಕು ಅವರೇನು ದೆವ್ವ ಅಲ್ಲ ಅಲ್ವಾ, ಅವರು ಅಂದ್ರೆ ನಾನು ಯಾಕೆ ಭಯ ಪಡಬೇಕು? ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯನವರದಲ್ಲಿ ಬೆಳೆದಿದ್ದೀನಾ? ಸಿಎಂ ಸಿದ್ದರಾಮಯ್ಯ ನೆರಳಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಸ್ವಂತ ದುಡಿಮೆಯ ರಾಜಕೀಯಕ್ಕೆ ಬಂದಿದ್ದೇನೆ. ಸಿದ್ದರಾಮಯ್ಯ ಅವರೆ ದೇವೇಗೌಡರ ನೆರಳಲ್ಲಿ ಬಂದಿರುವಂತಹವರು. ಅವರು ನಮ್ಮ ಪಕ್ಷದ ಕಾರ್ಯಕರ್ತ. ನನಗೆ ಯಾವ ಬಂಧನದ ಭೀತಿನೂ ಇಲ್ಲ ಎಂದು ತಿಳಿಸಿದರು.
ಜೆಡಿಎಸ್ ವೀಕ್ ಆಗುತ್ತೋ ಸ್ಟ್ರಾಂಗ್ ಆಗುತ್ತೋ ಭಗವಂತ ತೀರ್ಮಾನ ತೆಗೆದುಕೊಳ್ಳುತ್ತಾನೆ. ಮೊದಲು ತಾವು ಸಮಸ್ಯೆಯಲ್ಲಿದ್ದೀರಲ್ಲ ಅದನ್ನು ಸರಿಪಡಿಸಿಕೊಳ್ಳಿ. ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಯಾವ ಪಕ್ಷಕ್ಕೂ ಹೆದರಲ್ಲ. ಹೆದರುವುದು ದೇವರಿಗೆ ಮತ್ತು ಜನರಿಗೆ ಮಾತ್ರಸಿದ್ದರಾಮಯ್ಯನಂತವರು ಲಕ್ಷ ಜನ ಬರಲಿ ಹೆದರಲ್ಲ. ನನ್ನನ್ನು ಬೆಳೆಸಿದ ಈ ನಾಡಿನ ಜನತೆಗೆ ಹೆದರುತ್ತೇನೆ ಮತ್ತೆ ದೇವರಿಗೆ ಹೆದರುತ್ತೇನೆ ಎಂದು ತಿಳಿಸಿದರು.