ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಗೆ ಚಾಕು ಇರಿದಿದ್ದ ಪ್ರಕರಣ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಹೌದು ಪ್ರಯಾಣಿಕ ಒಬ್ಬ ಬಿಎಂಟಿಸಿ ವೋಲ್ವೋ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಬಿಎಂಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಪ್ರಯಾಣಿಕನೊಬ್ಬ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದಂತಹ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅತ್ತಿಬೆಲೆಯಿಂದ ಮೆಜೆಸ್ಟಿಕ್ ಗೆ ಹೋಗುತ್ತಿದ್ದ ವೋಲ್ವೋ ಬಸ್ ನಲ್ಲಿ ನಿನ್ನೆ ಸಂಜೆ 4:30 ಗಂಟೆಗೆ ಈ ಒಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹೊಸ ರೋಡ್ ನಿಲ್ದಾಣದ ಬಳಿ ಇಳಿದು ಪ್ರಯಾಣಿಕ ಉದ್ಧಟತನ ತೋರಿದ್ದಾನೆ. ಬಸ್ ಸ್ಟಾಪ್ ಆದಾಗ ಬಸ್ ನಿಂದ ಇಳಿದು ಬ್ಯಾಗಿನಿಂದ ಸ್ಕ್ರೂಡ್ರೈವರ್ ತೋರಿಸಿ ಬೆದರಿಸಿದ್ದಾನೆ. ಕೊನಪ್ಪನ ಅಗ್ರಹಾರದಲ್ಲಿ ಪ್ರಯಾಣಿಕ ಬಸ್ ಹತ್ತಿದ್ದಾನೆ ಹೊಸ ರೋಡ್ ಬಸ್ ಸ್ಟಾಪ್ ಅಲ್ಲಿ ಇಳಿದಾಗ ಇಬ್ಬರಿಗೂ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.