Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಜಿ.ಪಂ, ತಾ.ಪಂ ಚುನಾವಣೆ ವಿಳಂಬ: ಹೈಕೋರ್ಟ್ ಗೆ ಕ್ಷಮೆಯಾಚಿಸಿ ಮತ್ತಷ್ಟು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕುಮಾರಸ್ವಾಮಿ’ಯವರೇ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ, ಬೆದರಿಗೆ ಹಾಕುವುದು ಬಿಡಿ: ರಮೇಶ್ ಬಾಬು
KARNATAKA

‘ಕುಮಾರಸ್ವಾಮಿ’ಯವರೇ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ, ಬೆದರಿಗೆ ಹಾಕುವುದು ಬಿಡಿ: ರಮೇಶ್ ಬಾಬು

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕುಮಾರಸ್ವಾಮಿರವರು ರಾಜ್ಯದಲ್ಲಿ ಪ್ರತೀ ದಿನ ತಮ್ಮ ಮೇಲೆ ತನಿಖೆ ಮಾಡುವ ಅಧಿಕಾರಿಗಳನ್ನು ತೇಜೋವದೆ ಮಾಡುವ ಕೆಲಸಕ್ಕೆ ಮುಂದಾಗಿರುತ್ತಾರೆ. ಇವರ ಸುಳ್ಳಿನ ಆರೋಪಕ್ಕೆ ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಉತ್ತರ ನೀಡಿರುತ್ತಾರೆ. ಮಾನ್ಯ ಕುಮಾರಸ್ವಾಮಿರವರು ಪದೇ ಪದೇ ತನಿಖಾ ಸಂಸ್ಥೆಗಳ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮತ್ತು ಬೆದರಿಕೆ ಹಾಕುವ ಪ್ರಯತ್ನವನ್ನು ಕೈಬಿಡಲಿ ಎಂಬುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರು ಹಾಗೂ ಮಾಜಿ ಪರಿಷತ್ ಸದಸ್ಯರಾದಂತ ರಮೇಶ್ ಬಾಬು ತಿಳಿಸಿದ್ದಾರೆ.

ಇಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೇಂದ್ರ ಸಚಿವರಾದ ಹೆಚ್. ಡಿ ಕುಮಾರಸ್ವಾಮಿರವರು ಮೂಡ ಹಗರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳನ್ನು ಮತ್ತು ಮೂಡ ಆಯುಕ್ತರನ್ನು ರಾಜಕೀಯವಾಗಿ ಟೀಕಿಸಿರುವುದು ಅವರ ಹತಾಶವದದ ಸಂಕೇತವಾಗಿರುತ್ತದೆ ಎಂದಿದ್ದಾರೆ.

ತನಿಖಾ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಮೂಗಿನ ನೇರಕ್ಕೆ ವರ್ತಿಸುವ ರೀತಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರವರು ಬೇದರಿಸುತ್ತಿರುವುದು, ತನಿಖೆಯ ಹಾದಿಯನ್ನು ತಪ್ಪಿಸುವ ಉದ್ದೇಶವಾಗಿರುತ್ತದೆ. ಕರ್ನಾಟಕ ಹೈ ಕೋರ್ಟಿನ ತೀರ್ಪಿನಲ್ಲಿ ಮುಖ್ಯಮಂತ್ರಿಗಳ ಪತ್ನಿಯು ಪಕ್ಷಗಾರರು ಆಗಿರುವುದಿಲ್ಲ. ಮೂಡ ಹಗರಣದಲ್ಲಿ ನಿವೇಶನಗಳನ್ನು ವಾಪಸ್ಸು ನೀಡುವ ನಿರ್ಧಾರ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಮೂಡ ಹಗರಣದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಯಾವುದೇ ತೀರ್ಮಾನಗಳನ್ನು ಅಥವಾ ತಮ್ಮ ಅಭಿಪ್ರಾಯಗಳನ್ನು ಆಯೋಗದ ಮುಂದೆ ಸಲ್ಲಿಸಲು ಎಲ್ಲರಿಗೂ ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

ನಿಯಮಗಳನ್ನು ಮೀರಿ ಮೂಡದಲ್ಲಿ ಪರ್ಯಾಯ ಕೈಗಾರಿಕಾ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಕುಮಾರಸ್ವಾಮಿರವರು ತಮ್ಮ ಮೇಲಿನ ಆರೋಪಗಳಿಗೆ ಇಲ್ಲಿಯವರೆಗೆ ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಆದರೆ ರಾಜಕೀಯ ಕಾರಣಗಳಿಗಾಗಿ ಸಿಎಂ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿರುವ ವಿಷಯದಲ್ಲಿ ಅಧಿಕಾರಿಗಳು ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಯಲ್ಲಿ ನಿವೇಶನ ಪಡೆದು ಮತ್ತೆ ವಾಪಸ್ಸು ನೀಡಿದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿರವರು ಇಂತಹ ಹೇಳಿಕೆಗಳನ್ನು ಮಾಡುತ್ತಿರಬಹುದು? ಎಂದು ಪ್ರಶ್ನಿಸಿದ್ದಾರೆ.

ಮೂಡ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ವಿಚಾರಣೆ ನಡೆದು ತೀರ್ಪು ಬರುವ ಮುನ್ನವೇ ತಮ್ಮ ವೈಯಕ್ತಿಕ ಅನಿಸಿಕೆಗಳ ಆಧಾರದ ಮೇಲೆ ಮತ್ತು ಮುಖ್ಯಮಂತ್ರಿಗಳ ಮೇಲಿನ ಸೇಡಿನ ರಾಜಕಾರಣಕ್ಕಾಗಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ತಾವೇ ತೀರ್ಪುಗಳನ್ನು ನೀಡಲು ಹೊರಟಿದ್ದಾರೆ. ಬಿಜೆಪಿ ನಾಯಕರು ಈ ಹಿಂದೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿಕೊಂಡು ನ್ಯಾಯಾಲಯದಲ್ಲಿ ಕೇಸು ದಾಖಲಾದಾಗ ಸ್ವತ್ತನ್ನು ವಾಪಸ್ಸು ಕೊಟ್ಟಿರುತ್ತಾರೆ. ಕುಮಾರಸ್ವಾಮಿರವರ ಮೇಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಸದನದ ಒಳಗೆ ದಾಖಲೆಗಳ ಸಮೇತ ಮೂಡ ಹಗರಣವನ್ನು ತನಿಖೆ ಮಾಡಲು ಸಭಾಪತಿಗಳನ್ನು ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.

ಇದರ ಬಗ್ಗೆ ಚಕಾರ ಎತ್ತದ ಕುಮಾರಸ್ವಾಮಿರವರು ರಾಜ್ಯದಲ್ಲಿ ಪ್ರತೀ ದಿನ ತಮ್ಮ ಮೇಲೆ ತನಿಖೆ ಮಾಡುವ ಅಧಿಕಾರಿಗಳನ್ನು ತೇಜೋವದೆ ಮಾಡುವ ಕೆಲಸಕ್ಕೆ ಮುಂದಾಗಿರುತ್ತಾರೆ. ಇವರ ಸುಳ್ಳಿನ ಆರೋಪಕ್ಕೆ ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಉತ್ತರ ನೀಡಿರುತ್ತಾರೆ. ಮಾನ್ಯ ಕುಮಾರಸ್ವಾಮಿರವರು ಪದೇ ಪದೇ ತನಿಖಾ ಸಂಸ್ಥೆಗಳ ಮೇಲೆ, ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮತ್ತು ಬೆದರಿಕೆ ಹಾಕುವ ಪ್ರಯತ್ನವನ್ನು ಕೈಬಿಡಲಿ. ಕೇಂದ್ರದ ಬಿಜೆಪಿ ಸರ್ಕಾರ ಸರ್ಕಾರಿ ಅಧಿಕಾರಿಗಳನ್ನಿ ಬೆದರಿಸುವ ಕಾರಣಕ್ಕಾಗಿ ಕುಮಾರಸ್ವಾಮಿ ರವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿರುವಂತೆ ಕಾಣುತ್ತಿದೆ. ಇಂತಹ ಹತಾಶ ಮನೋಭಾವದಿಂದ ಕೇಂದ್ರ ಸಚಿವ ಕುಮಾರಸ್ವಾಮಿರವರು ತಮ್ಮ ಸಚಿವ ಸ್ಥಾನಕ್ಕೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಾವೇ ಮಸಿ ಬಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

JOB ALERT: ಶೀಘ್ರವೇ 46,000 ರೈಲ್ವೆ ಹುದ್ದೆಗಳ ಭರ್ತಿಗೆ ಅಧಿಸೂಚನೆ, ಕನ್ನಡದಲ್ಲೇ ಪರೀಕ್ಷೆ: ಕೇಂದ್ರ ಸಚಿವ ವಿ.ಸೋಮಣ್ಣ

BREAKING : ಉಡುಪಿಯಲ್ಲಿ 5 ಕ್ವಿಂಟಲ್ ‘ಚೀನಾ ಬೆಳ್ಳುಳ್ಳಿ’ ಜಪ್ತಿ : ಆತಂಕದಲ್ಲಿ ಗ್ರಾಹಕರು!

Share. Facebook Twitter LinkedIn WhatsApp Email

Related Posts

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

9 Mins Read

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

2 Mins Read

ಜಿ.ಪಂ, ತಾ.ಪಂ ಚುನಾವಣೆ ವಿಳಂಬ: ಹೈಕೋರ್ಟ್ ಗೆ ಕ್ಷಮೆಯಾಚಿಸಿ ಮತ್ತಷ್ಟು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

2 Mins Read
Recent News

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಜಿ.ಪಂ, ತಾ.ಪಂ ಚುನಾವಣೆ ವಿಳಂಬ: ಹೈಕೋರ್ಟ್ ಗೆ ಕ್ಷಮೆಯಾಚಿಸಿ ಮತ್ತಷ್ಟು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

BREAKING : ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ : ಪ್ರೇಯಸಿ ಜನ್ಮದಿನವೇ ಪ್ರಿಯಕರ ಆತ್ಮಹತ್ಯೆಗೆ ಶರಣು!

State News
KARNATAKA

ಅಡಿಕೆ ಬೆಳೆಗಾರರ ಬದುಕಿಗೆ ಹೆಚ್.ಎಸ್.ಮಂಜಪ್ಪ ಅವರು ‘ರಕ್ಷಾ ಕವಚ’: ಶಾಸಕ ಅರಗ ಜ್ಞಾನೇಂದ್ರ ಶ್ಲಾಘನೆ

By ವಸಂತ ಬಿ ಈಶ್ವರಗೆರೆ KARNATAKA 9 Mins Read

ಶಿವಮೊಗ್ಗ: ಒಬ್ಬ ವ್ಯಕ್ತಿಗೆ ಈ ಮಟ್ಟದ ಒಂದು ಸತ್ಕಾರ ಅನ್ನುವಂತದ್ದು, ಒಂದು ಜಗದ ಬದುಕಿನಲ್ಲಿ ಸಾರ್ಥಕತೆಯನ್ನು ಕೊಡುತ್ತದೆ ಅಂತ ಹೇಳಿ…

BIG NEWS : ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕಾರ ಮಾಡಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಜಿ.ಪಂ, ತಾ.ಪಂ ಚುನಾವಣೆ ವಿಳಂಬ: ಹೈಕೋರ್ಟ್ ಗೆ ಕ್ಷಮೆಯಾಚಿಸಿ ಮತ್ತಷ್ಟು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

BREAKING : ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ : ಪ್ರೇಯಸಿ ಜನ್ಮದಿನವೇ ಪ್ರಿಯಕರ ಆತ್ಮಹತ್ಯೆಗೆ ಶರಣು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.