ಕೋಲಾರ : ಕೋಲಾರದಲ್ಲಿ ಒಂದೇ ಕುಟುಂಬದ 6 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ಘಟನೆಲ್ಲಿ ಓರ್ವ ವ್ಯಕ್ತಿ ಸಾವನಪ್ಪಿದ್ದು, ಉಳಿದವರಿಗೆ ಗಂಭೀರವಾದಂತಹ ಗಾಯಗಳಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ಜಂಗಾಲಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ಹೆಜ್ಜೇನು ದಾಳಿಯಿಂದಾಗಿ ವೆಂಕಟಸ್ವಾಮಿ (60) ಸಾವನ್ನಪ್ಪಿದ್ದಾರೆ.ಒಂದೇ ಕುಟುಂಬದ 6 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ.
ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್ ಹಾಗೂ ವೆಂಕಟ ಗಿರಿಯಪ್ಪ ಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.