ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿತರಣೆ ನಡೆಸಿ ಅಕ್ಟೋಬರ್ 4ಕ್ಕೆ ವಿಚಾರಣೆ ಮುಂದೂಡಿತ್ತು. ಇದೀಗ ಪ್ರಕರಣದ A1 ಆರೋಪಿ ಆಗಿರುವ ಪವಿತ್ರ ಗೌಡ ಜಾಮೀನು ಅರ್ಜಿ ಕೂಡ ಅಕ್ಟೋಬರ್ 4ಕ್ಕೆ ಮಂದೂಡಿದೆ.
ಹೌದು ಇಂದು ಪ್ರಕರಣದ ಏ ಒನ್ ಆರೋಪಿ ಆಗಿರುವ ಪವಿತ್ರ ಗೌಡ ಸಲ್ಲಿಸಿದ ಜಾಮೀನು ಅರ್ಜಿಯ ಕುರಿತು, ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಇವಳೇ ಪವಿತ್ರ ಗೌಡ ಪರ ವಕೀಲರು ವಾದಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಪ್ರಕರಣದ ಮತ್ತೊರ್ವ ಆರೋಪಿಯಾಗಿರುವ ರವಿಶಂಕರ್ ಜಾಮೀನು ಅರ್ಜಿಯ ವಿಚಾರಣೆ ಕೂಡ ಕೋರ್ಟ್ ಮಂದೂಡಿದೆ ಈಗಾಗಲೇ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆದರೆ, ಈ ಮೂವರು ಆರೋಪಿಗಳಿಗೆ ಯಾರು ಶ್ಯುರಿಟಿ ಕೊಡದ ಕಾರಣ ಅವರು ಇನ್ನೂ ಜೈಲಿನಿಂದ ಬಿಡುಗಡೆಯಾಗಿಲ್ಲ.