ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮತ್ತೆ ಅಕ್ಟೋಬರ್.4ಕ್ಕೆ ಮುಂದೂಡಿಕೆ ಮಾಡಿದೆ. ಈ ಮೂಲಕ ಜಾಮೀನು ನಿರೀಕ್ಷೆಯಲ್ಲಿದ್ದಂತ ನಟ ದರ್ಶನ್ ಗೆ ಬಿಗ್ ಶಾಕ್ ನೀಡಲಾಗಿದೆ.
ಇಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯವು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆಯಲ್ಲಿ ನ್ಯಾಯಾಲಯಕ್ಕೆ ನಟ ದರ್ಶನ್ ಪರ ವಕೀಲರು ತಮ್ಮ ಕಕ್ಷಿದಾರರ ಪರವಾಗಿ ವಾದಿಸಲು ಹೆಚ್ಚಿನ ಕಾಲಾವಕಾಶ ಕೋರಿದರು. ಈ ಕಾರಣದಿಂದ ವಿಚಾರಣೆಯನ್ನು ಅಕ್ಟೋಬರ್.4ಕ್ಕೆ ಮುಂದೂಡಿತು.
ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದಾರೆ. ಈವರೆಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒರ್ವ ಆರೋಪಿಗೆ ಮಾತ್ರವೇ ಜಾಮೀನು ದೊರೆತಿದೆ. ಇನ್ನುಳಿದ ಆರೋಪಿಗಳು ಜೈಲಲ್ಲೇ ಇದ್ದಾರೆ. ಯಾರಿಗೂ ಜಾಮೀನು ದೊರೆತಿಲ್ಲ. ಇಂದು ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ಮತ್ತೆ ಮುಂದೂಡಿ, ಬಿಗ್ ಶಾಕ್ ನೀಡಿದೆ.
BREAKING : ಬೆಂಗಳೂರಲ್ಲಿ ಕಿಲ್ಲರ್ ‘BMTC’ ಗೆ ಮತ್ತೊಂದು ಬಲಿ : ಬಸ್ ಚಕ್ರದ ಅಡಿ ಸಿಲುಕಿ ಬೈಕ್ ಸವಾರ ದುರ್ಮರಣ!
BREAKING : ತಿರುಪತಿ ಲಡ್ಡು ವಿವಾದ : ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್! | Tirupati Laddu Row