ಬೆಂಗಳೂರು: ರಾಜ್ಯದ ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿಯೂ ನಮ್ಮ ಕ್ಲಿನಿಕ್ ಓಪನ್ ಮಾಡಲಾಗಿದೆ. ಈ ನಮ್ಮ ಕ್ಲಿನಿಕ್ ನಲ್ಲಿ ಇನ್ಮುಂದೆ ನೇತ್ರ ಚಿಕಿತ್ಸೆ, ಮಕ್ಕಳಿಗೆ ವಿವಿಧ ಲಸಿಕೆ ಹಾಕುವಂತ ನಿರ್ಧಾರಕ್ಕೂ ಸರ್ಕಾರ ಮುಂದಾಗಿದೆ.
ಪ್ರಾಯೋಗಿಕ ಎನ್ನುವಂತೆ ರಾಜ್ಯದ ರಾಜಧಾನಿ ಬೆಂಗಳೂರಿನ ನಮ್ಮ ಕ್ಲಿನಿಕ್ ನಲ್ಲಿ ಶೀಘ್ರದಲ್ಲೇ ಕಣ್ಣಿನ ಪರೀಕ್ಷೆ ಹಾಗೂ ಅದಕ್ಕೆ ಚಿಕಿತ್ಸೆಯಂತ ಸೌಲಭ್ಯಗಳು ದೊರೆಯಲಿದ್ದಾವೆ. ಅಲ್ಲದೇ ಮಕ್ಕಳಿಗೆ ವಿವಿಧ ಲಸಿಕಾಕರಣ ಕೂಡ ನಡೆಯಲು ತಯಾರಿ ನಡೆಸಲಾಗಿದೆ.
ಇನ್ನೂ ನಾಯಿ ಕಡಿತಕ್ಕೆ ಚುಚ್ಚುಮದ್ದು ಸೇರಿದಂತೆ ಇನ್ನೂ ಕೆಲವು ಸೇವೆಗಳನ್ನು ಆರಂಭಿಸುವ ಮೂಲಕ ನಮ್ಮ ಕ್ಲಿನಿಕ್ ಗಳನ್ನು ಮೇಲ್ದರ್ಜೆಗೆ ಏರಿಸೋದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಸೇವೆಯನ್ನು ರಾಜ್ಯಾಧ್ಯಾಂತ ಇರುವಂತ ನಮ್ಮ ಕ್ಲಿನಿಕ್ ಗಳಲ್ಲಿಯೂ ಪ್ರಾರಂಭಿಸುವಂತ ಆಲೋಚನೆ ಇದೆ.
ಅಂದಹಾಗೇ ಕಳೆದ ಎರಡು ವರ್ಷಗಳ ಹಿಂದೆ ನಗರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲೇ ಕರ್ನಾಟಕದಲ್ಲೂ ನಮ್ಮ ಕ್ಲಿನಿಕ್ ಆರಂಭಿಸಲಾಗಿತ್ತು. ಈ ಕ್ಲಿನಿಕ್ ಗಳು ರೋಗಿಗಳ ವರದಾನವೇ ಆಗಿವೆ. ಈಗ ಮತ್ತಷ್ಟು ಸೇವೆಯನ್ನು ಈ ನಮ್ಮ ಕ್ಲಿನಿಕ್ ನಲ್ಲಿ ಹೆಚ್ಚಿಸಲು ಸರ್ಕಾರ ಮುಂದಾಗಿ, ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ.