Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM

BREAKING: ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಸೋಲು, ಅಧಿಕಾರದತ್ತ ಬಿಜೆಪಿ!

04/05/2026 9:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಜಿಲ್ಲೆಗಳಿಗೂ `ಇ-ಆಸ್ತಿ ತಂತ್ರಾಂಶ’ ವಿಸ್ತರಣೆ : ಹಕ್ಕು ವರ್ಗಾವಣೆಗೆ ಕಾವೇರಿ -2 ತಂತ್ರಾಂಶ ಸಂಯೋಜನೆ
KARNATAKA

BIG NEWS : ರಾಜ್ಯದ ಎಲ್ಲಾ ಜಿಲ್ಲೆಗಳಿಗೂ `ಇ-ಆಸ್ತಿ ತಂತ್ರಾಂಶ’ ವಿಸ್ತರಣೆ : ಹಕ್ಕು ವರ್ಗಾವಣೆಗೆ ಕಾವೇರಿ -2 ತಂತ್ರಾಂಶ ಸಂಯೋಜನೆ

By kannadanewsnow5725/09/2024 5:47 AM
vidhana soudha
vidhana soudha

ಬೆಂಗಳೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಈಗಾಗಲೇ ಸಂಯೋಜಿಸಲಾಗಿರುವ ಈ ಆಸ್ತಿ ತಂತ್ರಾಂಶವನ್ನು ಇತರೆ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿರುತ್ತದೆ ಹಾಗೂ ಜಮೀನಿನ ಸರ್ವೆ ನಕ್ಷೆ (ಸ್ಕೆಚ್) – ನಮೂನೆ-11ಇ ಇರುವ ಮೋಜಿಣಿ ತಂತ್ರಾಂಶದೊಂದಿಗೆ ಕಾವೇರಿ ತಂತ್ರಾಂಶವನ್ನು ದಿನಾಂಕ: 05-10-2016 ರಿಂದಲೇ ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಸಂಯೋಜನೆ ಮಾಡಲಾಗಿದೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಯೇತ್ತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಸ್ವತ್ತು ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಈಗಾಗಲೇ ದಿನಾಂಕ:18-07-2014ರ ಸುತ್ತೋಲೆಯಲ್ಲಿ ಸಂಯೋಜನೆಗೊಳಿಸಲಾಗಿದೆ.

ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿ ದಿನಾಂಕ: 29-01-2020ರಂದು ಜೋಡಣೆ /ಸಂಯೋಜನೆ ಮಾಡಿ ಆದೇಶ ಹೊರಡಿಸಲಾಗಿದ್ದು, ಇದು ಯಶಸ್ವಿಯಾಗಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ 42 ವಾರ್ಡ್‌ಗಳಲ್ಲಿ ಹಾಗೂ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ, ಇನ್ನುಳಿದ ನಗರ ಪ್ರದೇಶಗಳಲ್ಲಿ ಸ್ವತ್ತುಗಳಿಗೆ ಇ-ಆಸ್ತಿ ಖಾತಾ ಇಲ್ಲದಿದ್ದಲ್ಲಿ ಸಾರ್ವಜನಿಕರು ಸಂಯೋಜನೆಯತ್ತರ ನೋಂದಣಿಯ ಮಾದರಿಯನ್ನು ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಲು ಇರುವ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಕಾವೇರಿ ತಂತ್ರಾಂಶದಲ್ಲಿ ಸ್ವತ್ತಿನ ಸ್ವರೂಪವನ್ನು “ಇತರೆ” ಎಂದು ಆಯ್ಕೆ ಮಾಡಿಕೊಂಡು ಕೆಲವು ಕಛೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನೋಂದಣಿ ಮಾಡಲಾಗುತ್ತಿರುವುದು ಕಂಡು ಬಂದಿರುವುದರಿಂದ ಹಾಗೂ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ಸ್ವತ್ತನ್ನು ಗುರುತಿಸಬಲ್ಲ ವಿವರಣೆ ಇಲ್ಲದ ಹೊರತು ನೋಂದಣಿಗೆ ಸ್ವೀಕರಿಸಬಾರದೆಂದು ನೋಂದಣಿ ಕಾಯ್ದೆ 1908ರ ಕಲಂ 21ರಲ್ಲಿ ಅವಕಾಶ ಕಲ್ಪಿಸಿರುವುದರಿಂದ, ಇ-ಖಾತೆಯಲ್ಲಿ ಮಾತ್ರ ಸ್ವತ್ತಿನ ಪಿಐಡಿ ಸಂಖ್ಯೆ ಲಭ್ಯವಾಗುವುದರಿಂದ, ಕಾವೇರಿ-2.0 ತಂತ್ರಾಂಶದಲ್ಲಿ ಕೃಷಿಯೇತ್ತರ ಸ್ವತ್ತುಗಳನ್ನು ಒಳಗೊಂಡಿರುವ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಇ-ಸ್ವತ್ತು ಅಥವಾ ಇ-ಆಸ್ತಿ ತಂತ್ರಾಂಶಗಳಿಂದ ಮಾಹಿತಿ ಪಡೆದು ನೋಂದಾಯಿಸಲು ಹಾಗೂ ಸಂಯೋಜನೆಯೇತ್ತರ ವಿಧಾನದಲ್ಲಿ ನೋಂದಣಿಯನ್ನು ನಿಲ್ಲಿಸಲು ಅನುಮತಿ ನೀಡುವಂತೆ ಹಾಗೂ ಸಂಯೋಜನೆಯನ್ನು ಹಂತ ಹಂತವಾಗಿ ಮಾಡಲಾಗುವುದೆಂದು ಮೇಲೆ ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಪ್ರಸ್ತಾವನೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (6) ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ರಾಜ್ಯದ 4 ಜಿಲ್ಲೆಗಳಾದ ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ದಿನಾಂಕ: 09-09-2024 ರಿಂದ ಸಂಯೋಜನೆಗೊಳಿಸಲು ಹಾಗೂ ಇ-ಆಸ್ತಿ ತಂತ್ರಾಂಶದಿಂದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ದಿನಾಂಕ: 02-09-2024 ರಂದು ಆದೇಶ ಹೊರಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ರಾಜ್ಯದ 08 ಜಿಲ್ಲೆಗಳಾದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ದಿನಾಂಕ: 23-09-2024 ರಿಂದ ಸಂಯೋಜನೆಗೊಳಿಸುವ ಸಂಬಂಧ ಮೇಲೆ ಕ್ರಮ ಸಂಖ್ಯೆ (8) ರಲ್ಲಿ ದಿನಾಂಕ: 17-09-2024 ರಂದು ಆದೇಶ ಹೊರಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಉಳಿದ 23, ಜಿಲ್ಲೆಗಳಾದ ಶಿವಾಜಿನಗರ, ಜಯನಗರ, ರಾಜಾಜಿನಗರ, ಬಸವನಗುಡಿ, ಗಾಂಧಿನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ದಿನಾಂಕ: 07- 10-2024 ರಿಂದ ಸಂಯೋಜನೆಗೊಳಿಸುವಂತೆ ಮೇಲೆ ಕ್ರಮ ಸಂಖ್ಯೆ (9) ರಲ್ಲಿ ಓದಲಾದ ಪ್ರಸ್ತಾವನೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (7) ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಭೌತಿಕ ಖಾತಾ ದಾಖಲೆಗಳನ್ನು ಪರಿಗಣಿಸದೇ, ಇ-ಆಸ್ತಿ ತಂತ್ರಾಂಶದ ಮೂಲಕ ಮಾತ್ರ ಕಡ್ಡಾಯವಾಗಿ ಪಡೆದು ನೋಂದಾಯಿಸಲು, ಇ-ಆಸ್ತಿ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಸಂಯೋಜಿಸಿ ಈಗಾಗಲೇ ಜಾರಿಯಲ್ಲಿರುವ 41 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳಿಗೂ ಸಹ ವಿಸ್ತರಿಸಿ ಈ ವ್ಯವಸ್ಥೆಯನ್ನು ದಿನಾಂಕ: 30-09-2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಿ ದಿನಾಂಕ:12-09-2024ರಂದು ಆದೇಶ ಹೊರಡಿಸಲಾಗಿರುವುದರಿಂದ ಹಾಗೂ ನಗರಾಭಿವೃದ್ಧಿ ಇಲಾಖೆಯು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಜೋಡಣೆ ಮಾಡಲು ನಗರಾಭಿವೃದ್ಧಿ ಇಲಾಖೆಯು ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಅನಧಿಕೃತ ಟಿಪ್ಪಣಿಯಲ್ಲಿ ಸಹಮತಿ ನೀಡಿರುವುದರಿಂದ ಹಾಗೂ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಮಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ಉಳಿದ 18 ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಉಡುಪಿ, ಕಾರವಾರ, ಮಂಗಳೂರು, ಧಾರವಾಡ, ವಿಜಯಪುರ, ವಿಜಯನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ಕೋಲಾರ, ಕಲಬುರಗಿ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ದಿನಾಂಕ:07-10-2024 ರಿಂದ ಸಂಯೋಜನೆಗೊಳಿಸಲು ಸರ್ಕಾರವು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದೆ.

BIG NEWS : ರಾಜ್ಯದ ಎಲ್ಲಾ ಜಿಲ್ಲೆಗಳಿಗೂ `ಇ-ಆಸ್ತಿ ತಂತ್ರಾಂಶ' ವಿಸ್ತರಣೆ : ಹಕ್ಕು ವರ್ಗಾವಣೆಗೆ ಕಾವೇರಿ -2 ತಂತ್ರಾಂಶ ಸಂಯೋಜನೆ BIG NEWS: 'E-property software' extended to all districts of the state: Cauvery-2 software integration for transfer of rights
Share. Facebook Twitter LinkedIn WhatsApp Email

Related Posts

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM1 Min Read

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM1 Min Read

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM2 Mins Read
Recent News

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

04/05/2026 9:54 PM

BREAKING: ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಸೋಲು, ಅಧಿಕಾರದತ್ತ ಬಿಜೆಪಿ!

04/05/2026 9:43 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM
State News
KARNATAKA

ಕೇರಳದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದ್ದ 33 ಕ್ಷೇತ್ರಗಳಲ್ಲಿ 24ರಲ್ಲಿ ಯುಡಿಎಫ್ ಭರ್ಜರಿ ಗೆಲುವು

By kannadanewsnow0904/05/2026 9:54 PM KARNATAKA 1 Min Read

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದೆ. ಈ ಚುನಾವಣಾ ಯಶಸ್ಸಿನಲ್ಲಿ ಕರ್ನಾಟಕದ ವಸತಿ…

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಕಬ್ಬನ್ ಪಾರ್ಕ್ ನಿಲ್ದಾಣದ ತಾತ್ಕಾಲಿಕವಾಗಿ ಕ್ಲೋಸ್ | Namma Metro

04/05/2026 9:33 PM

ಮಲೆನಾಡಿನ ವಿನಾಶಕ್ಕೆ ಬಿಡುವುದಿಲ್ಲ: ಬೇಸೂರು ಅಣು ಸ್ಥಾವರಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಿರೋಧ

04/05/2026 9:24 PM

ಸಾಗರದ ಬೇಸೂರು ಅಣು ಸ್ಥಾವರಕ್ಕೆ ವಿರೋಧ: ದಾಖಲೆ ನೀಡದಿದ್ದರೆ ಕಾನೂನುಭಂಗ ಚಳವಳಿ- ತೀ.ನ.ಶ್ರೀನಿವಾಸ್ ಎಚ್ಚರಿಕೆ

04/05/2026 8:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.