ಚಿಕ್ಕಮಗಳೂರು : ಸದ್ಯ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಕ್ಕಳು, ಮಹಿಳೆಯರು, ಅಷ್ಟೆ ಯಾಕೆ ವೃದ್ಧೆ ಎನ್ನದೆ ಎಲ್ಲರ ಮೇಲು ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದೀಗ ಚಿಕ್ಕಮಗಳೂರಿನ ಕಡೂರು ಪಟ್ಟಣದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಗೆ ಸಲೂನ್ ಮಾಲೀಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಹೌದು ಕಡೂರು ಪಟ್ಟಣದಲ್ಲಿ ತಾಯಿಯೊಬ್ಬರು ತನ್ನ 8 ವರ್ಷದ ಮಗಳನ್ನು ಕಟಿಂಗ್ ಶಾಪ್ ಗೆ ಕರೆದುಕೊಂಡು ಬಂದಿರುತ್ತಾರೆ. ಈ ವೇಳೆ ಕಟಿಂಗ್ ಶಾಪಿನ ಮಾಲೀಕರಿಗೆ ಮನೆಗೆ ಬೇಗ ಹಾಕಿಲ್ಲ ಹೋಗಿ ಬರುತ್ತೇನೆ ಎಂದು ಹೇಳಿ ಮನೆಗೆ ತೆರಳುತ್ತಾರೆ. ಈ ವೇಳೆ ಕಟಿಂಗ್ ಶಾಪ್ ಬಾಗಿಲು ಮುಚ್ಚಿ ಮಾಲೀಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ವೇಳೆ ತಾಯಿಯು ಮರಳಿ ಬರುವಷ್ಟರಲ್ಲಿ ಕಟ್ಟಿಂಗ್ ಶಾಪ್ ವ್ಯಕ್ತಿ ಸಲೂನ್ ಬಾಗಿಲು ಹಾಕಿಕೊಂಡು ಮಗುವಿನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.ಈ ವೇಳೆ ಮಗು ಕಿರುಚಿ ಕೊಂಡಿದ್ದು ಸ್ಥಳಕ್ಕೆ ಬಂದ ತಾಯಿ ಕೂಡ ಕಿರುಚಾಡಿದ್ದಾಳೆ. ಈ ವೇಳೆ ಸಲೂನ್ ವ್ಯಕ್ತಿ ಮಗುವಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆಂದು ಆರೋಪಿಸಿ ಒಂದು ಕೋಮಿನ ಸಾವಿರಾರು ಜನ ಸೇರಿ ಕಟ್ಟಿಂಗ್ ಶಾಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.