ಬೆಂಗಳೂರು : ಇತ್ತೀಚಿಗೆ ರೈಲು ಅಪಘಾತಗಳ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಈ ವೇಳೆ ಮತ್ತೊಂದು ರೈಲಿಗೆ ಬೆಂಕಿ ತಗುಲಿದೆ. ಬೆಂಗಳೂರು-ಗುವಾಹಟಿ ಎಕ್ಸ್ ಪ್ರೆಸ್ ರೈಲಿನ ಸ್ಲೀಪರ್ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಆಂಧ್ರಪ್ರದೇಶದ ಸಿಂಹಾಚಲಂನಲ್ಲಿ ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲಿನ ಸ್ಲೀಪರ್ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪೈಲಟ್ ರೈಲು ನಿಲ್ಲಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಸಿಂಹಾಚಲಂ ತಲುಪುವ ವೇಳೆಗೆ ಎಸ್ 7 ಸ್ಲೀಪರ್ ಕೋಚ್ ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಾಗ ಪ್ರಯಾಣಿಕರು ಜಾಗೃತರಾದರು. ತಕ್ಷಣ ಬೆಂಗಳೂರು-ಗುವಾಹಟಿ ಎಕ್ಸ್ಪ್ರೆಸ್ ರೈಲನ್ನು ಸಿಂಹಾಚಲಂನಲ್ಲಿ ನಿಲ್ಲಿಸಲಾಯಿತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.