ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇದರ ಬೆನ್ನಲ್ಲೇ ಪೊಲೀಸರ ವಿಚಾರಣೆಯ ವೇಳೆ ಶಾಸಕ ಮುನಿರತ್ನ ತಮ್ಮ ವಿರುದ್ಧ ದೂರು ನೀಡಿದ್ದ ಮಹಿಳೆ ವಿರುದ್ಧ ಸ್ಪೋಟಕ ವಾದಂತಹ ಹೇಳಿಕೆ ನೀಡಿದ್ದಾರೆ.
ಹೌದು ಮುನಿರತ್ನ ಅವರು ಎಚ್ಐವಿ ಸೋಂಕಿತರನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ಮಹಿಳೆಯೊಬ್ಬರು ಇತ್ತೀಚಿಗೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಒಂದು ದೂರಿನ ಮೇರೆಗೆ ನಿನ್ನೆ ಪರಪ್ಪನ ಅಗ್ರಹಾರ ಜೈಲಲ್ಲೇ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದರು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಮುನಿರತ್ನ ಅವರು ದೂರು ನೀಡಿದ್ದ ಮಹಿಳೆಯೇ ನಿಮಗೆ ಯಾರ ವಿಡಿಯೋ ಬೇಕು ಹೇಳಿ ಎಂದು ಆಫರ್ ಕೊಟ್ಟಿದ್ದಳು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಚಾರಣೆ ವೇಳೆ ದೂರುದಾರೆ ನನಗೆ ತುಂಬಾ ಪರಿಚಯ, ಆಕೆಯ ವೃತ್ತಿಯ ಹನಿಟ್ರ್ಯಾಪ್ ಮಾಡುವುದಾಗಿದೆ. ನಿಮಗೆ ಯಾರ ವಿಡಿಯೋ ಬೇಕು ಹೇಳಿ, ನಿಮಗೆ ದುಷ್ಮನ್ ಯಾರಿದ್ದಾರೆ ಹೇಳಿ. ಅಂತಹವರ ವಿಡಿಯೋ ಮಾಡಿಕೊಡುತ್ತೇನೆ ಎಂದು ಆಫರ್ ಕೊಟ್ಟಿದ್ದಳು. ಇದಕ್ಕೆ ನಾನು ಒಪ್ಪಿರಲಿಲ್ಲ.ದೂರುದಾರೆಯೇ ಹನಿಟ್ರ್ಯಾಪ್ ಮಾಡುವ ಕೆಲವವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆ ವಿಡಿಯೋಗಳನ್ನು ನನಗೆ ತಂದು ತೋರಿಸುತ್ತಿದ್ದರು. ಆದರೆ ನಾನು ಆಕೆಯ ಕಡೆಯಿಂದ ಯಾವುದೇ ಹನಿಟ್ರ್ಯಾಪ್ ವಿಡಿಯೋಗಳನ್ನು ಮಾಡಿಸಿಲ್ಲ, ಎಂದು ಹೇಳಿಕೆ ನೀಡಿದ್ದಾರೆ.