ಬೆಂಗಳೂರು : ಬೆಂಗಳೂರಿನಲ್ಲಿ ದಿನೇ ದಿನೆ ರೋಡ್ ರೇಜ್ ಪ್ರಕರಗಳು ಹೆಚ್ಚಳವಾಗುತ್ತಿದ್ದು, ಐಜಿಪಿ ರಮೇಶ್ ಬಾನೋತ್ ಪುತ್ರನ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬ್ಯಾಟರಾಯನಪುರ ಸಿಗ್ನಲ್ ಬಳಿ ಐಜಿಪಿ ರಮೇಶ್ ಬಾನೋತ್ ಪುತ್ರ ಪ್ರೀತಮ್ ಬಾನೋತ್ ಮೇಲೆ ಕಿಡಿಗೇಡಿಗಳು ರಸ್ತೆಯಲ್ಲೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪ್ರೀತಂ ಬಾನೋತ್ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಕಾರನ್ನು ಅಡ್ಡಹಾಕಿದ ಕಿಡಿಗೇಡಿಗಳು ಮುಖಕ್ಕೆ ಪಂಚ್ ಕೊಟ್ಟು, ಕಾರಿನ ಗ್ಲಾಸ್ ಒಡೆದು ಹಲ್ಲೆ ಮಾಡಿ ಪರಾರಿಯಾಗಿದ್ದು, ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.