ಬೆಂಗಳೂರು : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2024) ಪ್ರಮಾಣ ಪತ್ರ ಬಿಡುಗಡೆಯಾಗಿದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ https://schooleducation.karnataka.gov.in ಮೂಲಕ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
2024ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KARTET-2024) ಯ ಫಲಿತಾಂಶವನ್ನು ದಿನಾಂಕ:09/08/2024 ರಂದು ಪ್ರಕಟಿಸಲಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ QR Code ಹೊಂದಿರುವ ಗಣಕೀಕೃತ ಪ್ರಮಾಣ ಪತ್ರವನ್ನು ಇಲಾಖಾ ವೆಬ್ಸೈಟ್ https://schooleducation.karnataka.gov.in/ . ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.