ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ಪ್ರಕರಣಗಳು ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಕೆಲ ಪುಂಡರು ಶಾಲಾ ಬಸ್ ಅಡ್ಡಗಟ್ಟಿ ಬಸ್ ಡ್ರೈವರ್ ಗೆ ಎಳೆದಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮಾರಗೊಂಡನಹಳ್ಳಿಯಲ್ಲಿ ಶಾಲಾ ಬಸ್ ನಲ್ಲಿ ಮಕ್ಕಳನ್ನು ಡ್ರಾಪ್ ಮಾಡಿ ಬರುವಾಗ ಸ್ಕಾರ್ಪಿಯೋ ವಾಹನದಲ್ಲಿ ಬಂದ ಪುಂಡರು ಶಾಲಾ ಬಸ್ ನಿಲ್ಲಿಸಿ ಪುಂಡಾಟ ಮೆರೆದಿದ್ದಾರೆ.
ಶಾಲಾ ಬಸ್ ನಲ್ಲಿ ಮಕ್ಕಳು ಇದ್ದಾಗಲೇ ಪುಂಡರು ಅಟ್ಟಹಾಸ ಮೆರೆದಿದ್ದು, ಶಾಲಾ ಬಸ್ ನ ಚಾಲಕನನ್ನು ಕೆಳಗೆ ಇಳಿಸಿ ಎಳೆದಾಡಿರುವ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.