ಬೆಂಗಳೂರು : ಬೆಂಗಳೂರಿನಲ್ಲಿ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ಇದೀಗ ನಿಫಾ ವೈರಸ್ ಗೆ ಬಲಿಗಾಗಿದ್ದಾನೆ ಎಂದು ತಿಳಿದುಬಂದಿದೆ. ಕೇರಳದ ಮಲಪುರಂ ಮೂಲದ 24 ವರ್ಷದ ವಿದ್ಯಾರ್ಥಿ ನಿಫಾ ವೈರಸ್ ಗೆ ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.
ಕಾಲಿಗೆ ಗಾಯ ವಾಗಿದ್ದರಿಂದ ಆಗಸ್ಟ್ 25ರಂದು ಬೆಂಗಳೂರಿನಿಂದ ವಿದ್ಯಾರ್ಥಿ ಕೇರಳಕ್ಕೆ ತೆರಳಿದ್ದಾನೆ. ಸೆಪ್ಟೆಂಬರ್ 5 ರಂದು ಜ್ವರ ಬಂದಿದ್ದರಿಂದ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಸೆಪ್ಟೆಂಬರ್ 6ರಂದು ವಾಂತಿ, ಸೆಪ್ಟೆಂಬರ್ 7ರಂದು ಆತನ ಆರೋಗ್ಯ ಗಂಭೀರವಾಗಿದೆ.
ತಕ್ಷಣ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುನಲ್ಲಿ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದವನು, ಇದೀಗ ನಿಫಾಗೆ ಬಲಿಯಾಗಿದ್ದಾನೆ. ಸೆಪ್ಟೆಂಬರ್ 8ರಂದು ನಿಫಾ ಸೊಂಕಿಗೆ ವಿದ್ಯಾರ್ಥಿ ಬಲಿಯಾಗಿದ್ದಾನೆ. ಮೃತ ವಿದ್ಯಾರ್ಥಿಯ ಬ್ಲಡ್ ಸ್ಯಾಂಪಲ್ ನಲ್ಲಿ ನೀಫಾ ಪಾಸಿಟಿವ್ ಎಂದು ದೃಢಪಟ್ಟಿದೆ.