ಮಂಡ್ಯ : ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ನಡೆದಿತ್ತು. ಮುಸ್ಲಿಮರು ಮೆರವಣಿಗೆ ವೇಳೆ ಕಲ್ಲುತೂರಿದ್ದರು. ಅಲ್ಲದೇ, ಕೆಲ ಅಂಗಡಿಗಳಿಗೂ ಬೆಂಕಿ ಹಾಕಲಾಗಿತ್ತು. ಇದೀಗ ಈ ಒಂದು ಗಲಭೆಗೆ ಸ್ಪೋಟಕವಾದಂತಹ ಟ್ವಿಸ್ಟ್ ಸಿಕ್ಕಿದ್ದು ಗಳಭೆಗು ಮುನ್ನ ಕಿಡಿಗೇಡಿಗಳು ಸಿಸಿಟಿವಿ ಗಳನ್ನು ಒಡೆದು ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.
ಹೌದು ನಾಗಮಂಗಲದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಬೆಚ್ಚಿ ಬೀಳಿಸುವಂತಹ ದೃಶ್ಯ ಸೆರೆಯಾಗಿದೆ. ಅಂಗಡಿಗಳಿಗೆ ಬೆಂಕಿ ಹಚ್ಚುವ ಮುನ್ನ ಸಿಸಿಟಿವಿಗಳನ್ನು ದ್ವಂಸ ಮಾಡಲಾಗಿದೆ. ಹಾರೆಯಿಂದ ಸಿಸಿಟಿವಿ ಒಡೆದು ಹಾಕಿದ್ದಾರೆ. ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಬಾರ್ದು ಎಂದು ಕಿಡಿಗೇಡಿಗಳು ಕಳ್ಳಾಟ ನಡೆಸಿದ್ದಾರೆ.
ಕಟ್ಟಡದ ಪಕ್ಕವೇ ಓಡಿ ಹೋಗುತ್ತಿದ್ದ, ಯುವಕರ ಗುಂಪಿನಲ್ಲಿ ಅಂಗಡಿ ಮುಂಭಾಗ ಓಡಿ ಬಂದ ಗುಂಪಿನಲ್ಲಿ ಇಬ್ಬರು ಇದ್ದಿದ್ದು ಕಂಡು ಬಂದಿದ್ದು, ಹಾರೆ ತೆಗೆದುಕೊಂಡು ಸಿಸಿಟಿವಿ ಒಡೆದು ಹಾಕುತ್ತಿರು ಮತ್ತು ಕೃತ್ಯ ಎಸಗುವಾಗ ಮುಖಕ್ಕೆ ಮಸ್ಕ್ ಕಟ್ಟಿಕೊಂಡಿರುವ ದೃಶ್ಯ ಇದೀಗ ಸೆರೆಯಾಗಿದೆ. ಹಾಗಾಗಿ ಇದು ಗಲಭೆ ಫ್ರೀ ಪ್ಲಾನ್ ಎಂದು ಹೇಳಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಗಲಭೆ ಕೇಸಲ್ಲಿ ಈವರೆಗೆ 150 ಆರೋಪಿಗಳ ಪೈಕಿ 52 ಜನರ ಹೆಸರು, ವಿಳಾಸ ಪತ್ತೆ ಹಚ್ಚಿ ಬಂಧಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109, 115, 118, 121, 132, 189, 190 ಸೇರಿದಂತೆ ಒಟ್ಟು 16 ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. 30 ಮಂದಿ ಮುಸ್ಲಿಮರು, 23 ಹಿಂದೂಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಲೆಮರೆಸಿಕೊಂಡ 97 ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ 52 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ. ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಆರೋಪಿಗಳನ್ನ ಶಿಫ್ಟ್ ಮಾಡಲಾಗಿದೆ.