ಬೆಂಗಳೂರು : 2024 ನೇ ಸಾಲಿನ ಎಸ್ ಎಸ್ ಎಲ್ ಸಿ ಸಂಕಲನಾತ್ಮಕ ಮೌಲ್ಯಮಾಪನ-1 ಪರೀಕ್ಷೆಯನ್ನು ಸೆ.24 ರಿಂದ ಅ.1 ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ವೇಳಾಪಟ್ಟಿ ಪ್ರಕಟಿಸಿದೆ.
2024-25ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-ಅನ್ನು ನಡೆಸಲು ಮಂಡಲಿಯಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನೀಡುವಂತೆ ಉಲ್ಲೇಖಿತ ಸುತ್ತೋಲೆಯಲ್ಲಿ ಸರ್ಕಾರದಿಂದ ಆದೇಶವಾಗಿರುತ್ತದೆ. ಅದರಂತೆ ಎಲ್ಲಾ ವಿಷಯಗಳಿಗೆ ಮಂಡಲಿ ಹಂತದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಶ್ನೆಪತ್ರಿಕೆಗಳ ಸಾಫ್ಟ್ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು.
ಅದರಂತೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಸಂಕಲನಾತ್ಮಕ ಮೌಲ್ಯಮಾಪನ-1ನ್ನು ದಿನಾಂಕ: 24.09.2024 ರಿಂದ 01.10.2024 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸದರಿ ಪರೀಕ್ಷೆಯನ್ನು ಆಯಾ ಶಾಲಾ ಹಂತದಲ್ಲಿ ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮವಹಿಸಲು ತಿಳಿಸಿದೆ.
ಇಲ್ಲಿದೆ `ಸಂಕಲನಾತ್ಮಕ ಮೌಲ್ಯಮಾಪನ-1 ಪರೀಕ್ಷೆ’ ವೇಳಾಪಟ್ಟಿ
ಸೆ.24- ಪ್ರಥಮ ಭಾಷ (ಕನ್ನಡ, ಹಿಂದಿ, ಇಂಗ್ಲಿಷ್)
ಸೆ.25- ದ್ವಿತೀಯ ಭಾಷ (ಇಂಗ್ಲಿಷ್, ಹಿಂದಿ) ಜೊತೆಗೆ ಅದೇ ದಿನ ಮಧ್ಯಾಹ್ನ (ಹಿಂದಿ, ಕನ್ನಡ, ಇಂಗ್ಲಿಷ್)
ಸೆ. 26-ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್
ಸೆ.27- ಕೋರ್ ವಿಷಯಗಳಾದ ಗಣಿತ, ಸಮಾಜ ಶಾಸ್ತ್ರ, ವಿಜ್ಞಾನ
ಸೆ.28- ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ
ಸೆ.30- ಸಮಾಜ ವಿಜ್ಞಾನ,
ಅ.1- ಜೆಟಿಎಸ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.