ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹರಿಯಾಣ ಮೂಲದ ನಕ್ಸಲ್ ಅನಿರುದ್ಧ್ ರಾಜನ್ ನನ್ನು ಬಂಧಿಸಿದ್ದಾರೆ.
ಅನಿರುದ್ಧ್ ರಾಜನ್ ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ನಿಷೇಧಿತ ಬರಹಗಳನ್ನು ಸರ್ಕ್ಯೂಲೆಟ್ ಮಾಡುತ್ತಿದ್ದ. ಆದರೆ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ತಂಡಕ್ಕೆ ಸಿಕ್ಕಿರಲಿಲ್ಲ. ಇದೀಗ ಮೂರ್ನಾಲ್ಕು ದಿನದ ಹಿಂದೆ ಗೆಳತಿಯನ್ನು ನೋಡಲು ಬೆಂಗಳೂರಿಗೆ ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಣ ಸಂಗ್ರಹ, ರಹಸ್ಯೆ ಸಭೆಗಳನ್ನು ಮಾಡುತ್ತಿದ್ದ ಅನಿರುದ್ಧ್ ರಾಜನ್, ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದು, ಅನಿರುದ್ಧ್ ನಿಂದ 2 ಬ್ಯಾಗ್, ಪೆನ್ ಡ್ರೈವ್ ಹಾಗೂ ಟ್ಯಾಬ್ ವಶಕ್ಕೆ ಪಡೆಯಲಾಗಿದ್ದು, ಅನಿರುದ್ಧ ವಿರುದ್ಧ UAPA ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.